ಮೈಸೂರು:ಲಾಕ್ಡೌನ್ನಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಶೂಲ ಮಾಡಿ ಬೆಳೆ ಬೆಳೆದರೂ, ಮಾರಾಟ ಮಾಡುವುದಕ್ಕೆ ಸೂಕ್ತ ಮಾರುಕಟ್ಟೆಯಿಲ್ಲದೇ ಅನ್ನದಾತರು ಪರದಾಡುತ್ತಿದ್ದಾರೆ.
ಬೆಳೆದ ಬೆಳೆ ಮಾರಲು ಸಿಗದ ಜಾಗ.. ನೇಣು ಹಾಕಿಕೊಳ್ಳಬೇಕಾದ ಸ್ಥಿತಿ ಎಂದು ರೈತನ ಆಕ್ರೋಶ! - ಮೈಸೂರಿನಲ್ಲಿ ಮಾರ್ಕೆಟ್ ಸಮಸ್ಯೆ
ಬೆಳೆದ ಬೆಳೆ ಮಾರಲು ಸರಿಯಾದ ಮಾರುಕಟ್ಟೆ ಸಿಗದೇ ರೈತರು ಹೈರಾಣಾಗಿದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆ ಮಾರಾಟ ಮಾಡಲು ಇಲ್ಲಿ ಯಾವುದೇ ಮಾರುಕಟ್ಟೆಯಿಲ್ಲ. ಹಾಗಾಗಿ ಆಡಳಿತದ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರೈತ
ಒಂದು ದಿನ ವಸ್ತು ಪ್ರದರ್ಶನದ ಆವರಣದಲ್ಲಿ, ಮತ್ತೊಂದು ದಿನ ಆರ್ಎಂಸಿ ಆವರಣದಲ್ಲಿ ಹೀಗೆ ದಿನಕ್ಕೊಂದು ಕಡೆ ಮಾರ್ಕೆಟ್ ವ್ಯವಸ್ಥೆ ಮಾಡಿದ್ರೆ, ನಾವು ತರಕಾರಿ ಮಾರೋದು ಹೇಗೆ ಅಂತಾ ಇಲ್ಲಿನ ರೈತರೊಬ್ಬರು ಪ್ರಶ್ನಿಸುತ್ತಿದ್ದಾರೆ. ದಿನಾ ಒಂದೊಂದು ಕಡೆ ಮಾರುಕಟ್ಟೆಯಿದ್ದರೆ, ಜನರು ತರಕಾರಿ ಖರೀದಿಸಲು ಹೇಗೆ ಬರ್ತಾರೆ. ಬೆಳೆದ ಬೆಳೆ ಮಾರಲು ಸರಿಯಾದ ಜಾಗ ಸಿಗದಿದ್ರೆ, ಜಮೀನಿನಲ್ಲಿ ನೇಣು ಹಾಕಿಕೊಳ್ಳಬೇಕಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.