ಮೈಸೂರು:ಮೈಸೂರು ನಗರದಲ್ಲಿ 24x7 ನೀರು ಸರಬರಾಜು ಇದ್ದು, ಪೈಪ್ ಲೈನ್ ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಪಾಲಿಕೆಯ ಮೇಯರ್ ತಸ್ನೀಂ ತಿಳಿಸಿದರು.
ವೇಗವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿಗೆ ಜಸ್ಕೋ ಅಡಿಯಲ್ಲಿ 24x7 ನೀರು ಸರಬರಾಜು ಯೋಜನೆಯನ್ನು ಜಾರಿಗೆ ತಂದಿದ್ದು, ಪ್ರಮುಖ ಬಡಾವಣೆಗಳಿಗೆ ನೀರು ಸರಬರಾಜು ಮಾಡಲು ಯಾವುದೇ ಸಮಸ್ಯೆ ಇಲ್ಲ. ಆದರೆ ಬೆಳೆಯುತ್ತಿರುವ ಹೊಸ ಬಡಾವಣೆ ಹಾಗೂ ನರಸಿಂಹರಾಜ ಕ್ಷೇತ್ರದ ಕೆಲವು ಬಡಾವಣೆಗಳಿಗೆ ಪೈಪ್ ಲೈನ್ ಸಮಸ್ಯೆ ಇದ್ದು, ಇದನ್ನು ಸರಿಪಡಿಸಲು ಪಾಲಿಕೆ ಈಗಾಗಲೇ ಕ್ರಮಗಳನ್ನು ಕೈಗೊಂಡಿದೆ.
ಮೈಸೂರಿನಲ್ಲಿ ನೀರು ಸರಬರಾಜಿಗೆ ಪೈಪ್ ಲೈನ್ ಸಮಸ್ಯೆ ಇಲ್ಲ; ಮೇಯರ್ ತಸ್ನೀಂ - ಮೈಸೂರು ಮೇಯರ್ ತಸ್ನೀಂ ನ್ಯೂಸ್
ಮೈಸೂರಿನಲ್ಲಿ ನೀರು ಸರಬರಾಜಿಗೆ ಪೈಪ್ ಲೈನ್ ಸಮಸ್ಯೆಯಿಲ್ಲ. ಸಣ್ಣಪುಟ್ಟ ತೊಂದರೆಗಳಿಗೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ ಅಂತಾ ಮೇಯರ್ ತಸ್ನೀಂ ಹೇಳಿದರು.
ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೀರಿನ ವ್ಯವಸ್ಥೆ ಬಗ್ಗೆ ಕೆಲವು ಭಾಗಗಳಲ್ಲಿ ದೂರುಗಳು ಬರುತ್ತಿವೆ. ಈ ಪ್ರದೇಶಗಳಿಗೆ ನಿರಂತರವಾಗಿ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲು 50 ಕೋಟಿ ರೂಪಾಯಿಯ 3 ಪ್ರಾಜೆಕ್ಟ್ಗಳನ್ನು ವಾಟರ್ ಬೋರ್ಡ್ಗೆ ನೀಡಲಾಗಿದೆ. ನೀರು ಪೂರೈಸಲು ಯಾವುದೇ ಸಮಸ್ಯೆ ಆಗದ ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಮೇಯರ್ ತಸ್ನೀಂ ಹೇಳಿದ್ದಾರೆ.
ಮೈಸೂರು ನಗರದಲ್ಲಿ ಅಂದಾಜು 1 ಲಕ್ಷದ 70 ಸಾವಿರ ಕನೆಕ್ಷನ್ ಇದ್ದು ಅನಧಿಕೃತವಾಗಿ 30 ಸಾವಿರಕ್ಕೂ ಹೆಚ್ಚು ಕನೆಕ್ಷನ್ಗಳಿವೆ. ನಗರಕ್ಕೆ ಕಬಿನಿ ಮತ್ತು ಕೆ.ಆರ್.ಎಸ್ ಜಲಾಶಯದಿಂದ ನಗರದ ವಾಣಿವಿಲಾಸ, ದೇವನೂರು, ಮೇಳಾಪುರ ಸರಬರಾಜು ಕೇಂದ್ರಗಳಿಗೆ ನೀರು ಬರಲಿದ್ದು, ಅಲ್ಲಿಂದ ನಗರದ ಬೇರೆ ಬೇರೆ ಕಡೆ ಸರಬರಾಜು ಆಗುತ್ತದೆ. ಈ ಹಂತದಲ್ಲಿ ಯಾವುದೇ ಪೈಪ್ ಲೈನ್ ಸಮಸ್ಯೆ ಕಂಡುಬರಲ್ಲ. ಆದರೆ ಕೆಲವು ಏರಿಯಾಗಳಲ್ಲಿ ಈ ಸಮಸ್ಯೆ ಇದೆ. ಆದ್ದರಿಂದ ಈ ಭಾಗಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತೇವೆ ಎಂದು ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ತಿಳಿಸಿದರು.