ಕರ್ನಾಟಕ

karnataka

ETV Bharat / state

ಡಿಸಿಎಂ, ಕಾರ್ಯಾಧ್ಯಕ್ಷರ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ: ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ - ಲೋಕಸಭೆ ಚುನಾವಣೆ

ಶಾಸಕರು ಟ್ರಿಪ್​ಗೆ ಹೋಗಿರುವುದನ್ನೆಲ್ಲ ದೊಡ್ಡ ವಿಷಯ ಮಾಡೋದು ಬೇಡ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

there-is-no-confusion-in-congress-party-says-minister-madhu-bangarappa
ಕಾಂಗ್ರೆಸ್​ನಲ್ಲಿ ಡಿಸಿಎಂ, ಕಾರ್ಯಾಧ್ಯಕ್ಷರ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ: ಸಚಿವ ಮಧು ಬಂಗಾರಪ್ಪ

By ETV Bharat Karnataka Team

Published : Oct 18, 2023, 5:36 PM IST

Updated : Oct 18, 2023, 5:55 PM IST

ಸಚಿವ ಮಧು ಬಂಗಾರಪ್ಪ

ಮೈಸೂರು: ಕಾಂಗ್ರೆಸ್ ಪಕ್ಷದಲ್ಲಿ ಡಿಸಿಎಂ ವಿಚಾರದಲ್ಲಿ ಮತ್ತು ಕಾರ್ಯಾಧ್ಯಕ್ಷರ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಶಾಸಕರು ಟ್ರಿಪ್​ಗೆ ಹೋಗಿರುವುದನ್ನೆಲ್ಲ ದೊಡ್ಡ ವಿಷಯ ಮಾಡೋದು ಬೇಡ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಮಕ್ಕಳ ದಸರಾ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಸಚಿವ ಶಿವಾನಂದ ಪಾಟೀಲ್ ಅವರ ಫೋಟೋ ವೈರಲ್ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ತನಿಖಾಧಿಕಾರಿ ಅಲ್ಲ, ಎಲ್ಲಿ ಏನಾಗಿದೆ, ಯಾವ ಮೂಲದ ಹಣ ಎಂದೆಲ್ಲ ನನಗೆ ಗೊತ್ತಿಲ್ಲ. ಸಿನಿಮಾ ತಾರೆಯರು, ರಾಜಕಾರಣಿಗಳು ಎಲ್ಲರನ್ನೂ ಜನ ಗಮನಿಸುತ್ತಾರೆ. ಸಾರ್ವಜನಿಕ ಜೀವನದಲ್ಲಿ ಇರುವವರು ಎಚ್ಚರಿಕೆಯಿಂದ ಇರಬೇಕು. ಇಷ್ಟು ಮಾತ್ರ ನಾನು ಹೇಳಲು ಬಯಸುತ್ತೇನೆ ಎಂದರು.

ಜೆಡಿಎಸ್​ ನಿಂದ ರಾಜ್ಯಾಧ್ಯಕ್ಷರ ಉಚ್ಛಾಟನೆ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಬೇರೆಯವರ ಮನೆ ವಿಚಾರವನ್ನು ನಾನ್ಯಾಕೆ ಮಾತನಾಡಲಿ, ನಾನು ಕಾಂಗ್ರೆಸ್ ನಲ್ಲಿ ಇದ್ದೇನೆ, ನನ್ನ ಮನೆಯ ಬಗ್ಗೆ ಏನಾದರೂ ಇದ್ದರೆ ಕೇಳಿ. ಬೇರೆಯವರ ಮನೆಯ ವಿಚಾರಗಳನ್ನು ನಾನು ಮಾತನಾಡುವುದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಒಬಿಸಿ ಘಟಕದ ಅಧ್ಯಕ್ಷನಾಗಿ ಮುಂದುವರೆಯುವೆ: ನಾನು ಕಾಂಗ್ರೆಸ್​ ಒಬಿಸಿ ಘಟಕದ ಅಧ್ಯಕ್ಷನಾಗಿದ್ದೇನೆ. ನನ್ನನ್ನು ಸ್ಕೂಲ್​ಗೆ ಸೇರಿಸಿದ್ದಾರೆ. ಶಿಕ್ಷಣ ಇಲಾಖೆಯ ಕೆಲಸಗಳು ಜಾಸ್ತಿ ಇರುವುದರಿಂದ ಒಬಿಸಿ ಘಟಕಕ್ಕೆ ಬೇರೆಯವರನ್ನು ನೇಮಕ ಮಾಡಿ ಅಂತ ಕೇಳಿದ್ದೆ. ಲೋಕಸಭೆ ಚುನಾವಣೆ ಮುಗಿಯುವವರೆಗೂ ನನ್ನನ್ನೇ ಮುಂದುವರಿಯುವಂತೆ ಪಕ್ಷ ಹೇಳಿದೆ ಎಂದು ಸಚಿವರು ಪ್ರತಿಕ್ರಿಯೆ ನೀಡಿದರು.

ಮಕ್ಕಳ ಅಗತ್ಯಕ್ಕೆ ಅನುಗುಣವಾಗಿ ಪಠ್ಯ ಪುಸ್ತಕ ಪರಿಷ್ಕರಣೆ:ಈ ಹಿಂದೆ ಬಿಜೆಪಿ ಪಕ್ಷದವರು ಏನೇನೋ ವಿಚಾರಗಳನ್ನು ಪಠ್ಯದೊಳಗೆ ಸೇರಿಸಿದ್ದರು. ಆ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸ್ವಲ್ಪ ಪ್ರಮಾಣದ ಬದಲಾವಣೆ ಮಾಡಬೇಕಿದೆ. ನಾನು ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷನಾಗಿದ್ದೆ. ನಮ್ಮ ಪ್ರಣಾಳಿಕೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುತ್ತೇವೆ ಎಂದು ಹೇಳಿದ್ದೆವು, ಹೇಳಿದಂತೆ ನಾವು ಮಾಡಿದ್ದೇವೆ. ಯಾವ ವಿಚಾರ ಇರಬೇಕು, ಯಾವ ವಿಚಾರ ತೆಗೆಯಬೇಕು ಎಂಬುದನ್ನು ನಾನು ಹೇಳುವುದಿಲ್ಲ. ಈ ವಿಚಾರದ ಬಗ್ಗೆ ನಾನು ಹೇಳಿದರೆ ವಿವಾದ ಆಗುತ್ತದೆ. ಅದಕ್ಕೆ ಅಂತಾನೆ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಇದೆ. ಸಮಿತಿಯವರು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಮೈಸೂರು ದಸರಾ: ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಗರುಡ ಉತ್ಸವ - ವಿಡಿಯೋ

Last Updated : Oct 18, 2023, 5:55 PM IST

ABOUT THE AUTHOR

...view details