ಕರ್ನಾಟಕ

karnataka

ETV Bharat / state

ರಾಜಕಾರಣದಲ್ಲಿ ಹಾವು-ಚೇಳುಗಳಿವೆ, ಯಡಿಯೂರಪ್ಪ ಎಚ್ಚರಿಕೆಯಿಂದ ಇರಬೇಕು: ಸಾ.ರಾ.ಮಹೇಶ್​​​

ರಾಜಕಾರಣದಲ್ಲಿ ಹಾವು-ಚೇಳುಗಳು ಇರುತ್ತವೆ, ನೋಡಿ ಮಾಡಿ ಸರ್ಕಾರ ನಡೆಸಬೇಕು ಎಂದು ಸಿಎಂ ಹೇಳಿಕೆಗೆ ಮಾಜಿ ಸಚಿವ ಸಾ.ರಾ.ಮಹೇಶ್ ಪ್ರತಿಕ್ರಿಯೆ ನೀಡಿದ್ದಾರೆ.

By

Published : Sep 30, 2019, 5:29 PM IST

ಸಾ.ರಾ. ಮಹೇಶ್ ಮಾತನಾಡಿದ್ದಾರೆ

ಮೈಸೂರು:ರಾಜಕಾರಣದಲ್ಲಿ ಹಾವು-ಚೇಳುಗಳು ಇರುತ್ತವೆ, ನೋಡಿ ಮಾಡಿ ಸರ್ಕಾರ ನಡೆಸಬೇಕು ಎಂದು ಸಿಎಂ ಹೇಳಿಕೆಗೆ ಮಾಜಿ ಸಚಿವ ಸಾ.ರಾ.ಮಹೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಸಾ.ರಾ.ಮಹೇಶ್

ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ, ಸಿಎಂ ಅವರ ತಂತಿ ಮೇಲಿನ ನಡಿಗೆ ವಿಚಾರಕ್ಕೆ ಪ್ರತಿಕ್ರಿಯಿಸಿ ರಾಜಕಾರಣದಲ್ಲಿ ಹಾವು, ಚೇಳುಗಳು ಇರುತ್ತವೆ.‌ ನೋಡಿ ಮಾಡಿ ಸರ್ಕಾರ ನಡೆಸಬೇಕು. ಬಿಜೆಪಿಯಲ್ಲಿ ಈಗ ಮೂರು ಗುಂಪುಗಳಿದ್ದು, 1 ಅನರ್ಹರ ಗುಂಪು, ಇನ್ನೊಂದು ಬಿಎಸ್​​​ವೈ ವಿರೋಧಿ ಗುಂಪು, ಮತ್ತೊಂದು ಸಚಿವ ಸ್ಥಾನ ಸಿಗದವರ ಗುಂಪು. ಹೀಗಾಗಿ ಸಿಎಂ ಯಡಿಯೂರಪ್ಪ ಮೂರೂವರೆ ವರ್ಷ ಪೂರೈಸಲಿ ಎಂದು ವ್ಯಂಗ್ಯವಾಡಿದರು.

ಇನ್ನು ಆರ್.ಆಶೋಕ್ ಆದಿಚುಂಚನಗಿರಿ ಶ್ರೀಗಳ ಫೋನ್ ಟ್ಯಾಪ್ ಆಗಿದೆ ಎಂದು ಹೇಳಿಕೆ ನೀಡುತ್ತಾರೆ. ಮತ್ತೊಂದು ಕಡೆ ಸಿಎಂ ಪುತ್ರ ವಿಜಯೇಂದ್ರ ಮತ್ತೊಂದು ಹೇಳಿಕೆ ಕೊಡುತ್ತಾರೆ. ತನಿಖೆ ಇನ್ನೂ ಪೂರ್ಣವಾಗಿಲ್ಲ. ಅಲ್ಲಿಯವರೆಗೆ ಸುಮ್ಮನಿರಬೇಕು. ಅದನ್ನು ಬಿಟ್ಟು ತನಿಖೆಯೇ ಪೂರ್ಣವಾಗಿಲ್ಲ. ಇವರಿಗೆ ಮಾಹಿತಿ ಹೇಗೆ ಸಿಕ್ಕಿತು ಎಂದು ಪ್ರಶ್ನೆ ಮಾಡಿದ ಸಾ.ರಾ.ಮಹೇಶ್, ಶ್ರೀಗಳು ಹಾಗೂ ದೊಡ್ಡಗೌಡರ ಸಂಬಂಧ ಚೆನ್ನಾಗಿದೆ. ಅವರ ಸಂಬಂಧ ಹಾಳು ಮಾಡುವ ಪ್ರಯತ್ನ ಬೇಡ ಎಂದರು.

ABOUT THE AUTHOR

...view details