ಕರ್ನಾಟಕ

karnataka

ETV Bharat / state

ಸರ್ಕಾರಿ ಶ್ರೀಗಂಧದ ಕೋಠಿಯಲ್ಲಿವೆ 6 ಟನ್ ತೂಕದ 3,960 ಆನೆ ದಂತಗಳು - ಮೈಸೂರಿನ ಸರ್ಕಾರಿ ಶ್ರೀಗಂಧ ಕೋಠಿ

ಮೈಸೂರಿನ ಸರ್ಕಾರಿ ಶ್ರೀಗಂಧ ಕೋಠಿಯಲ್ಲಿ ಭದ್ರತೆಯೊಂದಿಗೆ 3,960 ದಂತಗಳನ್ನು ಇಡಲಾಗಿದೆ. ಆನೆ ಸ್ವಾಭಾವಿಕವಾಗಿ ಸತ್ತ ಬಳಿಕ ಅಥವಾ ಅಕ್ರಮವಾಗಿ ಮಾರಾಟ ಮಾಡುವಾಗ ದಾಳಿ ನಡೆಸಿ ವಶಪಡಿಸಿಕೊಂಡ ದಂತಗಳಾಗಿದ್ದು, 6 ಟನ್​ಗೂ ಅಧಿಕ ತೂಕ ಇವೆ.

Government sandalwood kothi
ಸರ್ಕಾರಿ ಶ್ರೀಗಂಧದ ಕೋಠಿ

By

Published : Nov 9, 2020, 3:47 PM IST

ಮೈಸೂರು: ಆನೆಗಳ ಸ್ವಾಭಾವಿಕ ಸಾವು ಹಾಗೂ ಕಳ್ಳ ಮಾರಾಟದ ಸಂದರ್ಭದಲ್ಲಿ ವಶಪಡಿಸಿಕೊಂಡ 3,960 ಆನೆ ದಂತಗಳು ಮೈಸೂರಿನ ಅರಣ್ಯ ಭವನದಲ್ಲಿರುವ ಸರ್ಕಾರಿ ಶ್ರೀಗಂಧದ ಕೋಠಿಯಲ್ಲಿವೆ ಎಂದು ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಶಿವಶಂಕರ್ ಸ್ವಾಮಿ ಮಾಹಿತಿ ನೀಡಿದ್ದಾರೆ.

ಸರ್ಕಾರಿ ಶ್ರೀಗಂಧದ ಕೋಠಿಯಲ್ಲಿವೆ 6 ಟನ್ ತೂಕದ 3,960 ಆನೆ ದಂತಗಳು

ದೇಶದಲ್ಲೇ ಕರ್ನಾಟಕದ ಬಂಡೀಪುರ ನಾಗರಹೊಳೆ ಪ್ರದೇಶದಲ್ಲಿ ಅತೀ ಹೆಚ್ಚು ಆನೆಗಳಿದ್ದು, ಇಲ್ಲಿ ಸ್ವಾಭಾವಿಕವಾಗಿ ಆನೆಗಳ ಸಾವು ಜೊತೆಗೆ ದಂತಕ್ಕಾಗಿ ಆನೆಗಳನ್ನು ಕೊಲ್ಲುವುದು ಸಹ ವರದಿಯಾಗಿತ್ತು. ಇಂಥ ಸಂದರ್ಭದಲ್ಲಿ ಸ್ವಾಭಾವಿಕವಾಗಿ ಆನೆ ಸತ್ತ‌ ನಂತರ ದಂತವನ್ನು ತೆಗೆದ ಬಳಿಕ ಆನೆಯ ಅಂತ್ಯಕ್ರಿಯೆ ನಡೆಸುವುದು ಸಂಪ್ರದಾಯ.

ಮೈಸೂರಿನ ಸರ್ಕಾರಿ ಶ್ರೀಗಂಧ ಕೋಠಿಯಲ್ಲಿ ಬಿಗಿಯಾದ ಭದ್ರತೆಯೊಂದಿಗೆ ದಂತಗಳ ರಕ್ಷಣೆ ಮಾಡಿದ್ದೇವೆ. ಈ ರೂಮ್​​ನಲ್ಲಿ ಈಗ 3,960 ದಂತಗಳಿದ್ದು, ಅಂದಾಜು 6 ಟನ್ 400 ಕೆ.ಜಿ ತೂಕದಷ್ಟು ದಂತಗಳಿವೆ. ಮುಂದೆ ಈ ದಂತಗಳನ್ನು ರಕ್ಷಣಾ ಇಲಾಖೆಗೆ ನೀಡಬಹುದು ಎಂದು ಕೇಂದ್ರ ಸರ್ಕಾರ ಆದೇಶ ಮಾಡಿತ್ತು, ಅದರಂತೆ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳ ಕಚೇರಿಯಲ್ಲಿ ಇಡಲು 530ರಿಂದ 540 ದಂತಗಳನ್ನು ಕೊಟ್ಟಿದ್ದೇವೆ. ಆನಂತರ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಇದಕ್ಕೆ ಅಸಮಾಧಾನಗೊಂಡಿದ್ದರಿಂದ ಸರ್ಕಾರ ರಕ್ಷಣಾ ಇಲಾಖೆಗೆ ದಂತಗಳನ್ನು ಕೊಡುವುದನ್ನು ಈಗ ನಿಲ್ಲಿಸಲಾಗಿದೆ ಎಂದಿದ್ದಾರೆ.

ABOUT THE AUTHOR

...view details