ಮೈಸೂರು: ರೆಸಾರ್ಟ್ನಲ್ಲಿ ವಾಸ್ತವ್ಯವಿದ್ದ ಪ್ರವಾಸಿಗರೊಬ್ಬರ ಚಿನ್ನಾಭರಣ, ಹಣ, ಲ್ಯಾಪ್ಟಾಪ್ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆಯ ಬದನಗುಪ್ಪೆಯಲ್ಲಿ ನಡೆದಿದೆ.
ರೆಸಾರ್ಟ್ನಲ್ಲಿ ತಂಗಿದ್ದ ಪ್ರವಾಸಿಗನ ಹಣ, ಚಿನ್ನಾಭರಣ ದೋಚಿದ ಖದೀಮರು! - Mysore crime latest news
ಜಿಲ್ಲೆಯ ಹೆಚ್.ಡಿ.ಕೋಟೆಯ ಬದನಗುಪ್ಪೆಯಲ್ಲಿರುವ ರೆಸಾರ್ಟ್ನಲ್ಲಿ ತಂಗಿದ್ದ ಪ್ರವಾಸಿಯೋರ್ವರ ನಗದು, ಲ್ಯಾಪ್ಟಾಪ್ ಸೇರಿದಂತೆ ಚಿನ್ನಾಭರಣ ಕಳ್ಳತನವಾಗಿವೆ.
Bichanahali
ಬದನಗುಪ್ಪೆ ಗ್ರಾಮದಲ್ಲಿರುವ ರೆಡ್ ಅರ್ಥ್ ರೆಸಾರ್ಟ್ನಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರು ಮೂಲದ ಸುಧೀರ್ ಯಜವತ್ ಎಂಬ ಪ್ರವಾಸಿಗೆ ಸೇರಿದ ಸುಮಾರು 60 ಸಾವಿರ ರೂ. ನಗದು, ಚಿನ್ನದ ಸರ ಮತ್ತು ಲ್ಯಾಪ್ಟಾಪ್ ಕಳ್ಳತನ ಆಗಿದೆ. ಸುಧೀರ್ ರಾತ್ರಿ ಊಟಕ್ಕೆ ತೆರಳಿದ್ದ ವೇಳೆ ಕಳ್ಳತನವಾಗಿದೆ ಎನ್ನಲಾಗಿದೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಸೀಲನೆ ನಡೆಸಿದ್ದು, ರೆಸಾರ್ಟ್ನಲ್ಲಿದ್ದವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕುಕಲಾಗುತ್ತಿದೆ. ಈ ಸಂಬಂಧ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.