ಮೈಸೂರು: ಮೈಸೂರು-ತಿ.ನರಸೀಪುರ ತಾಲೂಕಿನ ರಸ್ತೆಯ ಕೆಂಪಯ್ಯನಹುಂಡಿ ಗ್ರಾಮದಲ್ಲಿರುವ ನಟ ದರ್ಶನ್ ಫಾರ್ಮ್ ಹೌಸ್ನಲ್ಲಿ ಸುಮಾರು 10 ಸಾವಿರ ರೂ. ಮೌಲ್ಯದ ತೆಂಗಿನಕಾಯಿ ಕಳ್ಳತನವಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೋಟದಲ್ಲಿ ಕಳ್ಳತನ.. ತಿ.ನರಸೀಪುರ ಠಾಣೆಯಲ್ಲಿ ದೂರು ದಾಖಲು - ಚಾಲೆಂಜಿಂಗ್ ಸ್ಟಾರ್ ದರ್ಶನ್
ನಟ ದರ್ಶನ್ ಫಾರ್ಮ್ ಹೌಸ್ನಲ್ಲಿ ಕಳ್ಳತನವಾಗಿದ್ದು, ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್
ತೋಟದಲ್ಲಿ 400 ತೆಂಗಿನ ಮರಗಳಿವೆ. ನಿತ್ಯ 300 ಕಾಯಿಗಳು ಮರದಿಂದ ಬೀಳುತ್ತಿದ್ದವು. ಆದರೆ, ನಿನ್ನೆ ತೆಂಗಿನಕಾಯಿಗಳನ್ನು ತೆಗೆಯಲು ಹೋದ ವೇಳೆ ಒಂದೇ ಒಂದು ತೆಂಗಿನ ಕಾಯಿ ಇರಲಿಲ್ಲ. ತೋಟದಲ್ಲಿ ತೆಂಗಿನಕಾಯಿ ಕಳವಿನ ಬಗ್ಗೆ ಫಾರ್ಮ್ ಹೌಸ್ ನೋಡಿಕೊಳ್ಳುವ ಚಂದ್ರಕುಮಾರ್, ತಿ.ನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚಂದ್ರಕುಮಾರ್, ತೋಟದಲ್ಲಿ ಕೆಲಸ ಮಾಡುವ ನಾಗರಾಜು ಮತ್ತು ನಜೀಮ್ ಎಂಬವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಖಾಸಗಿ ಬ್ಯಾಂಕ್ ಎಟಿಎಂನಲ್ಲಿ ನಾಲ್ಕೂವರೆ ಲಕ್ಷ ರೂ. ದರೋಡೆ