ಮೈಸೂರು: ಎರಡು ದೇವಸ್ಥಾನಗಳ ಬೀಗ ಒಡೆದು ಕಳ್ಳತನ ಮಾಡಿರುವ ಘಟನೆ ಕೆಆರ್ ನಗರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಕೆಆರ್ ನಗರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ಗ್ರಾಮ ದೇವತೆ ಆದಿಶಕ್ತಿ ಮುತ್ತುತಾಳಮ್ಮ ಮತ್ತು ವೀರಭದ್ರೇಶ್ವರ ದೇವಾಲಯದ ಬೀಗ ಒಡೆದು ಕಳ್ಳತನ ಮಾಡಲಾಗಿದೆ. ಆದಿಶಕ್ತಿ ಮುತ್ತು ತಾಳಮ್ಮ ದೇವಾಲಯದಲ್ಲಿ ದೇವರ ಚಿನ್ನದ ತಾಳಿ, ಬೆಳ್ಳಿಯ ಗುಂಡು , ಹುಂಡಿಯಲ್ಲಿನ ಹಣವನ್ನು ಕಳ್ಳತನ ಮಾಡಲಾಗಿದೆ. ವೀರಭದ್ರೇಶ್ವರ ದೇವಾಲಯದಲ್ಲಿ 1,500 ಗ್ರಾಂ ಬೆಳ್ಳಿ, ಬೆಳ್ಳಿಯ ವಿಗ್ರಹಗಳನ್ನು ಹಾಗೂ ಹುಂಡಿಯಲ್ಲಿ ಇದ್ದ ಹಣವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಕೆಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಕಳೆದ 6 ತಿಂಗಳಿಂದ ಕೆಆರ್ ನಗರ ತಾಲೂಕಿನಲ್ಲಿ ದೇವಾಲಯಗಳ ಸರಣಿ ಕಳ್ಳತನ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.