ಕರ್ನಾಟಕ

karnataka

ETV Bharat / state

39 ಐಫೋನ್​​ ಕದ್ದ ಖದೀಮರು: ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಮೈಸೂರಿನಲ್ಲಿ ಮೊಬೈಲ್​ ಅಂಗಡಿ ಕಳ್ಳತನ

ಮೊಬೈಲ್ ಶಾಪ್​ನಲ್ಲಿ ಐಫೋನ್​ಗಳನ್ನೇ ಹೆಚ್ಚಾಗಿ ಕದ್ದು ಪರಾರಿಯಾಗಿರುವ ಘಟನೆ ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೈಸೂರಿನಲ್ಲಿ ಮೊಬೈಲ್​ ಅಂಗಡಿ ಕಳ್ಳತನ Theft in Mysore Mobile Shop
ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ

By

Published : Mar 2, 2020, 11:01 AM IST

ಮೈಸೂರು: ಮೊಬೈಲ್ ಶಾಪ್​ನಲ್ಲಿ ಐಫೋನ್​ಗಳನ್ನೇ ಹೆಚ್ಚಾಗಿ ಕದ್ದು ಪರಾರಿಯಾಗಿರುವ ಘಟನೆ ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನಗರದ ಕುವೆಂಪು ನಗರದಲ್ಲಿ ನ್ಯೂ ಕಾಂತರಾಜ್ ಅರಸು ರಸ್ತೆಯ ಅಕ್ಷಯ ಭಂಡಾರ್ ಸರ್ಕಲ್ ಬಳಿ ಇರುವ ಎಸ್.ಶಾಪಿ ಡಾಟ್ ಕಾಂ ಪ್ರೈವೇಟ್ ಲಿಮಿಟೆಡ್ ರಿಟೇಲ್ ಮೊಬೈಲ್ ಶೋ ರೂಮ್​ನಲ್ಲಿ ಈ ಕಳ್ಳತನ ನಡೆದಿದೆ. ರಾತ್ರಿ ವೇಳೆ ಬೀಗ ಮುರಿದು ಖದೀಮರು ತಮ್ಮ ಕೈಚಳಕ ತೋರಿದ್ದಾರೆ.

ಈ ಕುರಿತು ಕುವೆಂಪು ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ನಾಲ್ವರು ಕಳ್ಳರು ಮುಂಜಾನೆ 5.30ರ ಸಮಯದಲ್ಲಿ ದುಬಾರಿ ಐಫೋನ್​ಗಳನ್ನು ಚೀಲಕ್ಕೆ ತುಂಬಿಕೊಂಡು ಸುಮಾರು 39 ಐಫೋನ್​ಗಳನ್ನು ಹಾಗೂ ಇತರ ಒನ್ ಪ್ಲಸ್, ಒಪೋ ಮತ್ತು ರಿಯಲ್ ಮಿ ಫೋನ್​ಗಳನ್ನು ಕಳ್ಳತನ ಮಾಡಿರುವುದು ತಿಳಿದುಬಂದಿದೆ. 39 ಐಫೋನ್ ಸೇರಿ 33 ಲಕ್ಷ ರೂ. ಮೌಲ್ಯದ 60 ಮೊಬೈಲ್​ಗಳನ್ನು ಕದ್ದಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details