ಮೈಸೂರು:ಹೊಂಚು ಹಾಕಿ ವ್ಯಕ್ತಿಗಳಿಂದ ಹಣ ಸುಲಿಗೆ ಮಡುತ್ತಿದ್ದ ನಾಲ್ವರು ಸುಲಿಗೆಕೋರರನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹೊಂಚು ಹಾಕಿ ವ್ಯಕ್ತಿಗಳಿಂದ ಹಣ ಸುಲಿಗೆ: ನಾಲ್ವರು ಸುಲಿಗೆಕೋರರ ಬಂಧಿಸಿದ ಪೊಲೀಸ್ - ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ
ಹೊಂಚು ಹಾಕಿ ವ್ಯಕ್ತಿಗಳಿಂದ ಹಣ ಸುಲಿಗೆ ಮಡುತ್ತಿದ್ದ ನಾಲ್ವರು ಸುಲಿಗೆಕೋರರನ್ನು ಮೇಟಗಳ್ಳಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಿಷ್ಣು, ಗಿರೀಶ್,ಅಜಿತ್ ಕುಮಾರ್ ಮತ್ತು ಯಶವಂತ್ ಬಂಧಿತ ಆರೋಪಿಗಳು. ಇವರು ಮಾರ್ಚ್. ಮಾ.04 ರಂದು ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿ ವ್ಯಕ್ತಿಯನ್ನು ಅಡ್ಡಗಟ್ಟಿ ಆತನಿಂದ 28 ಸಾವಿರ ಹಣ, 25 ಗ್ರಾಂ ಚಿನ್ನ, ಒಂದು ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ವ್ಯಕ್ತಿ ಮೇಟಗಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಸಾಧನಹಳ್ಳಿ ತೋಟದಲ್ಲಿದ್ದ ಮನೆ ಮೇಲೆ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ, ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ಬಂಧಿತರಿಂದ 2 ಬೈಕ್ಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.