ಕರ್ನಾಟಕ

karnataka

ETV Bharat / state

ಪ್ರತಿ ಭಾನುವಾರ ರಜೆ, ಮಂಗಳವಾರ ಮೃಗಾಲಯ ವೀಕ್ಷಣೆಗೆ ಅವಕಾಶ - zoo executive director is Ajit Kulkarni

ಕೋವಿಡ್-19 ವೈರಾಣು ತಡೆಗಟ್ಟುವ ಹಿನ್ನೆಲೆಯಲ್ಲಿ ಜುಲೈ 5ರಿಂದ ಮುಂದಿನ ನಾಲ್ಕು ಭಾನುವಾರಗಳಂದು ಸಂಪೂರ್ಣ ಲಾಕ್​ಡೌನ್ ಮಾಡಲು ಆದೇಶಿಸಲಾಗಿದ್ದರಿಂದ ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಮಂಗಳವಾರದಂದು ವೀಕ್ಷಣೆಗೆ ತೆರೆಯಲಾಗುವುದು..

Sri Chamarajendra Zoo
ಶ್ರೀ ಚಾಮರಾಜೇಂದ್ರ ಮೃಗಾಲಯ

By

Published : Jun 29, 2020, 10:18 PM IST

ಮೈಸೂರು :ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನಕ್ಕೆ ಪ್ರತಿ ಭಾನುವಾರ ರಜೆ ಘೋಷಿಸಿ, ಮಂಗಳವಾರದಂದು ವೀಕ್ಷಣೆಗೆ ತೆರೆಯಲಾಗುವುದು ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.

ಪ್ರತಿ ಮಂಗಳವಾರ ಮೃಗಾಲಯ ಪ್ರಾರಂಭ

ಕೋವಿಡ್-19 ವೈರಾಣು ತಡೆಗಟ್ಟುವ ಹಿನ್ನೆಲೆಯಲ್ಲಿ ಜುಲೈ 5ರಿಂದ ಮುಂದಿನ ನಾಲ್ಕು ಭಾನುವಾರಗಳಂದು ಸಂಪೂರ್ಣ ಲಾಕ್​ಡೌನ್ ಮಾಡಲು ಆದೇಶಿಸಲಾಗಿದ್ದರಿಂದ ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಮಂಗಳವಾರದಂದು ವೀಕ್ಷಣೆಗೆ ತೆರೆಯಲಾಗುವುದು ಎಂದರು.

ಶ್ರೀ ಚಾಮರಾಜೇಂದ್ರ ಮೃಗಾಲಯ

ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನ್ನು ಜೂನ್ 30ರಂದು ವೀಕ್ಷಣೆಗೆ ತೆರೆಯಲಾಗುವುದು ಮತ್ತು ಜುಲೈ 5ರ ಭಾನುವಾರದಂದು ವೀಕ್ಷಣೆಗೆ ನಿರ್ಬಂಧಗೊಳಿಸಲಾಗುವುದು ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details