ಮೈಸೂರು: ಗೃಹಿಣಿಯೊಂದಿಗೆ ಕೆರೆಗೆ ಹಾರಿದ್ದ ಯುವಕನ ಮೃತದೇಹ ಇಂದು ಕೆರೆಯಲ್ಲಿ ಪತ್ತೆಯಾಗಿದೆ. ಹುಣಸೂರು ತಾಲೂಕಿನ ಉದ್ದೂರು ಬಳಿಯ ಕೆರೆಗೆ ಹಾರಿ ಶೀಲಾ (37) ಕುಮಾರ್ (27) ಸೆ.9 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಕೆರೆಯಲ್ಲಿ ಯುವಕನ ಮೃತ ದೇಹ ಪತ್ತೆಯಾಗಿದೆ.
ಕುಮಾರ್, ಶೀಲಾಳ ಪತಿಯ ಅಣ್ಣನ ಮಗ. ಕೆರೆಗೆ ಹಾರಿರುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕೆರೆ ದಡದಲ್ಲಿ ಕುಮಾರ್ ಹಾಗೂ ಶೀಲಾ ಮೊಬೈಲ್ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕೆರೆಗೆ ಹಾರಿರುವ ಶಂಕೆಯಿಂದ ಹುಡುಕಾಟ ನಡೆಸಲಾಗಿತ್ತು.