ಮೈಸೂರು :ನಂಜನಗೂಡಿನ ಬಳಿ ಇರುವ ಜುಬಿಲ್ಯಾಂಟ್ ಕಾರ್ಖಾನೆಗೆ ಚೀನಾದಿಂದ ಬಂದ ಕಂಟೈನರ್ ಮೂಲಕ ವೈರಸ್ ಹರಡಿದೆ ಎಂದು ಶಾಸಕ ಹರ್ಷವರ್ಧನ್ ಆರೋಪಿಸಿದ್ದಾರೆ. ರಾಜ್ಯದಲ್ಲೇ ಅತಿ ಹೆಚ್ಚು ಕೊರೊನಾ ವೈರಸ್ ಹರಡಿರುವ ಜುಬಿಲೆಂಟ್ ಕಾರ್ಖಾನೆಗೆ, ಕೊರೊನಾ ವೈರಸ್ ಬಂದಿದ್ದು ಹೇಗೆ ಎಂಬ ಬಗ್ಗೆ ಜಿಲ್ಲಾಡಳಿತಕ್ಕೆ ತೀವ್ರ ತಲೆನೋವು ಆಗಿ ಪರಿಣಮಿಸಿದೆ. ಕೊನೆಗೂ ವೈರಸ್ ಹರಡಿದ್ದು ಎಲ್ಲಿಂದ ಎಂಬ ಮಾಹಿತಿ ಹೊರಬಿದ್ದಿದೆ.
ತನಿಖೆ ಆಗುವವರೆಗೂ ಜೂಬಿಲೆಂಟ್ ಕಾರ್ಖಾನೆ ಒಪನ್ ಮಾಡಲು ಬಿಡಲ್ಲ.. ಶಾಸಕ ಹರ್ಷವರ್ಧನ್ - MLA Harshvardhan
ಈ ಬಗ್ಗೆ ಪುಣೆಯಲ್ಲಿರುವ ಇನ್ಸ್‌ಟಿಟ್ಯೂಟ್‌ನಿಂದ ಅಂತಿಮ ರಿಪೋರ್ಟ್ ಬರಬೇಕು. ಅಲ್ಲದೇ ಚೀನಾದಲ್ಲಿ ಕೊರೊನಾ ವೈರಸ್ ಇದ್ದರೂ ಕಂಟೈನರ್ ಆರ್ಡರ್ ಮಾಡಿದ್ದು ಏಕೆ ಹಾಗೂ ದೇಶದಲ್ಲಿ ಲಾಕ್‌ಡೌನ್ ಇದ್ದರೂ ನಂಜನಗೂಡು ಬಳಿಯ ಜುಬಿಲೆಂಟ್ ಕಾರ್ಖಾನೆಯನ್ನು ಒಪನ್ ಮಾಡಿದ್ದು ಏಕೆ ಎಂಬ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು.
ಕಳೆದ ಮಾರ್ಚ್‌ನಲ್ಲಿ ಚೀನಾದಿಂದ ಕಂಟೈನರ್ ಒಂದು ಬಂದಿತ್ತು. ಆ ಕಂಟೈನರ್ ಫೀಜರ್‌ಟೈಪ್ ಕೋಲ್ಡ್ ಸ್ಟೋರೇಜ್‌ನಲ್ಲಿ ಬಂದಿದೆ. ಆ ಪ್ಯಾಕ್ ಮೇಲೆ ಕೊರೊನಾ ವೈರಸ್ ಇದ್ದ ಬಗ್ಗೆ ಪಾಸಿಟಿವ್ ರಿಪೋರ್ಟ್ ಸಹ ಬಂದಿದೆ. ಈ ಬಗ್ಗೆ ಪುಣೆಯಲ್ಲಿರುವ ಇನ್ಸ್‌ಟಿಟ್ಯೂಟ್‌ನಿಂದ ಅಂತಿಮ ರಿಪೋರ್ಟ್ ಬರಬೇಕು. ಅಲ್ಲದೇ ಚೀನಾದಲ್ಲಿ ಕೊರೊನಾ ವೈರಸ್ ಇದ್ದರೂ ಕಂಟೈನರ್ ಆರ್ಡರ್ ಮಾಡಿದ್ದು ಏಕೆ ಹಾಗೂ ದೇಶದಲ್ಲಿ ಲಾಕ್‌ಡೌನ್ ಇದ್ದರೂ ನಂಜನಗೂಡು ಬಳಿಯ ಜುಬಿಲೆಂಟ್ ಕಾರ್ಖಾನೆಯನ್ನು ಒಪನ್ ಮಾಡಿದ್ದು ಏಕೆ ಎಂಬ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಅಲ್ಲಿಯವರೆಗೂ ಈ ಜುಬಿಲೆಂಟ್ ಕಾರ್ಖಾನೆಯನ್ನು ತೆರೆಯಲು ನಾವು ಬಿಡುವುದಿಲ್ಲ ಎಂದು ಶಾಸಕ ಹರ್ಷವರ್ಧನ್ ಹೇಳಿದರು.
ಈ ಕಂಪನಿಯಲ್ಲಿ ನಂಜನಗೂಡಿನ 900 ಜನ ಕೆಲಸ ಮಾಡುತ್ತಿದ್ದು, ಅವರ ಮನೆಯಲ್ಲಿ ಐದೈದು ಜನ ಅಂದ್ರೂ 5000 ಜನರಿಗೆ ಈ ಸಮಸ್ಯೆ ಬರಬಹುದು. ಈ ಕಂಪನಿಯ ಬೇಜವಾಬ್ದಾರಿ ಕೆಲಸದಿಂದ ಈ ರೀತಿ ಆಗಿದೆ. ಈ ಕಂಪನಿಯ ಮೊದಲ ಕೊರೊನಾ ಸೋಂಕಿತ ವ್ಯಕ್ತಿಯೇ ಈ ಕಂಟೈನರ್‌ನ ತೆಗೆದುಕೊಂಡಿದ್ದರು. ಇದರ ಬಗ್ಗೆ ಆತ ಯಾವುದೇ ವಿಚಾರವನ್ನು ಹೇಳುತ್ತಿಲ್ಲ ಎಂದು ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ಆರೋಪಿಸಿದ್ದಾರೆ.