ಕರ್ನಾಟಕ

karnataka

ETV Bharat / state

ಮೈಸೂರಿನ ಜನರ ಸಹಕಾರ ಹೆಚ್ಚಾಗುವ ಸಮಯ ಬರುತ್ತಿದೆ: ಡಿಸಿ ಅಭಿರಾಮ್ ಜಿ.ಶಂಕರ್​ - DC Abiram

ಮೈಸೂರಿನಲ್ಲಿ ಸಾಂಸ್ಥಿಕ ಕ್ವಾರೆಂಟೈನ್ ಕಡಿಮೆಯಾಗಿ ಹೋಂ ಕ್ವಾರೆಂಟೈನ್ ಹೆಚ್ಚಾಗುತ್ತಿವೆ. ಹೋಂ ಕ್ವಾರೆಂಟೈನ್​ ಒಳಗಾದವರು ಜವಾಬ್ದಾರಿಯಿಂದ ಹಾಗೂ ಓಡಾಡದಂತೆ ಜಾಗೃತಿ ವಹಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್​​ ಸಲಹೆ ನೀಡಿದರು.

ಡಿಸಿ ಅಭಿರಾಮ್
ಡಿಸಿ ಅಭಿರಾಮ್

By

Published : May 30, 2020, 4:46 PM IST

ಮೈಸೂರು:ಲಾಕ್​ಡೌನ್ ಮತ್ತಷ್ಟು ಸಡಿಲಿಕೆ ಆಗುತ್ತಿರುವುದರಿಂದ ಜನರ ಸಹಕಾರ ಹೆಚ್ಚಾಗುವ ಸಮಯ ಬರುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರೆಂಟೈನ್ ಕಡಿಮೆಯಾಗಿ ಹೋಂ ಕ್ವಾರೆಂಟೈನ್ ಹೆಚ್ಚಾಗುತ್ತಿದೆ. ಹೋಂ ಕ್ವಾರೆಂಟೈನ್​ನಲ್ಲಿ ಇರುವವರು ಜವಾಬ್ದಾರಿಯಿಂದ ಹಾಗೂ ಎಲ್ಲಿಯೂ ಓಡಾಡದಂತೆ ಜಾಗೃತಿ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್​

ಜಿಲ್ಲೆಯಲ್ಲಿ ಒಟ್ಟು 94 ಕೋವಿಡ್-19 ಪ್ರಕರಣಗಳ ಪೈಕಿ 91 ಡಿಸ್ಚಾರ್ಜ್ ಆಗಿದೆ. ಶುಕ್ರವಾರ 2 ಪ್ರಕರಣಗಳು ಪತ್ತೆಯಾಗಿದ್ದು ಅದರಲ್ಲಿ ಒಬ್ಬರು ಐರ್ಲೆಂಡ್​ನಿಂದ ಬೆಂಗಳೂರಿಗೆ ಬಂದಿದ್ದಾರೆ. ಮೈಸೂರಿಗೆ ಆ್ಯಂಬುಲೆನ್ಸ್ ಮುಖಾಂತರ ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಈತನಿಗೆಕೊರೊನಾ ದೃಢವಾಗಿದೆ. ಹೀಗಾಗಿ ಮೈಸೂರಿನ ವೈದ್ಯರು ಹಾಗೂ ಬೆಂಗಳೂರಿನ ಸರ್ಕಾರಿ ವೈದ್ಯರು ಮಾತುಕತೆ ನಡೆಸಿ ಅವರನ್ನು ಪುನ: ಬೆಂಗಳೂರಿಗೆ ಚಿಕಿತ್ಸೆಗಾಗಿ ಕರೆಸಿಕೊಂಡಿದ್ದಾರೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಸದ್ಯಕ್ಕೆ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಹಲವರನ್ನು ತಪಾಸಣೆ ಮಾಡಲಾಗಿದೆ. ಇಂದು ಸಂಜೆ ಅವರೆಲ್ಲರ ವರದಿ ಬರಲಿದೆ ಎಂದರು.

ABOUT THE AUTHOR

...view details