ಮೈಸೂರು:ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗುಂಡ್ಲುಪೇಟೆ ತಾಲೂಕಿನಲ್ಲಿ ಇಬ್ಬರನ್ನು ತಿಂದು ಹಾಕಿ ಕೊನೆಗೂ ಸೆರೆ ಸಿಕ್ಕಿರುವ ನರಭಕ್ಷಕ ಹುಲಿಯ ಆರೋಗ್ಯ ಸ್ಥಿರವಾಗಿದೆ.
ಸೆರೆಸಿಕ್ಕರೇನಂತೆ ನರಭಕ್ಷಕ ಮಾತ್ರ ಆರೋಗ್ಯವಾಗಿದ್ದಾನೆ.. - ಗುಂಡ್ಲುಪೇಟೆ ಹುಲಿ ಸುದ್ದಿ
ಗುಂಡ್ಲುಪೇಟೆ ತಾಲೂಕಿನಲ್ಲಿ ಇಬ್ಬರನ್ನು ತಿಂದು ಹಾಕಿ ಕೊನೆಗೂ ಸೆರೆ ಸಿಕ್ಕಿರುವ ನರಭಕ್ಷಕ ಹುಲಿಯ ಆರೋಗ್ಯ ಸ್ಥಿರವಾಗಿದೆ ಎಂದು ಮೃಗಾಲಯದ ನಿರ್ದೇಶಕರು ತಿಳಿಸಿದ್ದಾರೆ.
ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರ ಆದೇಶದಂತೆ ಮಾನವ-ಪ್ರಾಣಿ ಸಂಘರ್ಷ ಕಾರ್ಯಾಚರಣೆಯಡಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಗಂಡು ಹುಲಿಯನ್ನು ಅಕ್ಟೋಬರ್ 13ರಂದು ಸೆರೆ ಹಿಡಿಯಲಾಗಿತ್ತು.
ಶ್ರೀ ಚಾಮರಾಜೇಂದ್ರ ಮೃಗಾಲಯದ ವ್ಯಾಪ್ತಿಗೊಳಪಡುವ ಚಾಮುಂಡಿ ವನ್ಯಜೀವಿ ರಕ್ಷಣೆ, ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ಸುಪರ್ದಿಗೆ ಹಸ್ತಾಂತರಿಸಲಾಗಿದೆ. ನಾಲ್ಕೈದು ವರ್ಷದ ಹುಲಿಯ ಆರೋಗ್ಯಸ್ಥಿತಿಯು ಸ್ಥಿರವಾಗಿದೆ. ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ ಎಂದು ಶ್ರೀಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.