ಮೈಸೂರು: ಶಂಕಿತ ವ್ಯಕ್ತಿಯೊಬ್ಬ ಮೈಸೂರಿನಲ್ಲಿ ಕಾಲ್ ಸೆಂಟರ್ ಕೆಲಸಕ್ಕಾಗಿ ಬಂದಿದ್ದೇನೆ ಎಂದು ಹೇಳಿ ಮೊಬೈಲ್ ರಿಪೇರಿ ತರಬೇತಿಗೆ ಸೇರಿಕೊಳ್ಳುತ್ತಾನೆ. ಅಲ್ಲಿ ಕೆಲಸ ಸಿಗಲು ತಡವಾಗುತ್ತದೆ ಎಂಬ ಕಾರಣ ನೀಡಿ, ಆ ಸಮಯದಲ್ಲಿ ಮೊಬೈಲ್ ರಿಪೇರಿ ಕಲಿಯಲು ಸೇರಿಕೊಳ್ಳುತ್ತಿದ್ದೇನೆ ಎಂದು ಪ್ರೇಮ್ ರಾಜ್ ಹೆಸರಿನ ಆಧಾರ್ ಕಾರ್ಡ್ ನೀಡಿ, ನಲವತ್ತೈದು ದಿನದ ಮೊಬೈಲ್ ತರಬೇತಿ ಕೋರ್ಸ್ಗೆ ಸೇರಿಕೊಂಡಿದ್ದ ಎಂದು ಮೊಬೈಲ್ ಅಂಗಡಿ ಮಾಲೀಕ ಪ್ರಸಾದ್ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮಂಗಳೂರು ಆಟೋ ಸ್ಫೋಟದ ಪ್ರಕರಣದ ಶಂಕಿತ ಮೈಸೂರಿನಲ್ಲಿ ಬಾಡಿಗೆ ರೂಮ್ ಪಡೆದು, ಆ ರೂಮಿಗೆ ನಕಲಿ ಆಧಾರ್ ಕಾರ್ಡ್ ನೀಡಿದ್ದ. ಈ ಶಂಕಿತ ವ್ಯಕ್ತಿ ನಾನು ಮೈಸೂರಿನಲ್ಲಿ ಕಾಲ್ ಸೆಂಟರ್ ಕೆಲಸಕ್ಕೆ ಬಂದಿದ್ದೇನೆ. ಕೆಲಸ ಸಿಗುವುದು ಸ್ವಲ್ಪ ದಿನ ಆಗುತ್ತದೆ. ಹಾಗಾಗಿ ಈ ಸಮಯದಲ್ಲಿ ಮೊಬೈಲ್ ರಿಪೇರಿ ತರಬೇತಿಗೆ ಸೇರಿಕೊಳ್ಳಲು ಬಂದಿದ್ದೇನೆ. ನನ್ನ ಹೆಸರು ಪ್ರೇಮ್ ರಾಜ್ ಎಂದು ಹೇಳಿ, ಆಧಾರ್ ಕಾರ್ಡ್ ನೀಡಿದ್ದ. ನಾವು ಆತನಿಗೆ ಪ್ರವೇಶ ನೀಡಿ ಮೊಬೈಲ್ ತರಬೇತಿಗೆ ಅಡ್ಮಿಷನ್ ಮಾಡಿಕೊಂಡೆವು ಎಂದು ಮೊಬೈಲ್ ಅಂಗಡಿ ಮಾಲೀಕ ಪ್ರಸಾದ್ ಹೇಳುತ್ತಾರೆ.