ಮೈಸೂರು: 3 ಸಾವಿರ ಕುಟುಂಬಗಳಿಗೆ ತಮ್ಮ ಸ್ವಂತ ಉಳಿತಾಯದ ಹಣದಿಂದ ದಿನಸಿ ಪದಾರ್ಥಗಳನ್ನು ಕೊಡಿಸಿದ ಎಎಸ್‌ಐ ಕಾರ್ಯಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಡ ಕುಟುಂಬಗಳಿಗೆ ನೆರವು ನೀಡಿದ ಎಎಸ್‌ಐಗೆ ಪ್ರಶಂಸನಾ ಪತ್ರ ನೀಡಿದ ಎಸ್‌ಪಿ - HDKote ASI doreswamy
ಹೆಚ್.ಡಿ.ಕೋಟೆ ಠಾಣೆಯ ಎಎಸ್‌ಐ ದೊರೆಸ್ವಾಮಿ ಹೊರ ರಾಜ್ಯದ ಆಟೋ ರಿಕ್ಷಾ ಚಾಲಕರು, ಕೂಲಿ ಕಾರ್ಮಿಕರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಸ್ವಂತ ಹಣದಿಂದ 3 ಸಾವಿರ ಕುಟುಂಬಗಳಿಗೆ ಅಗತ್ಯ ದಿನಸಿ ಪದಾರ್ಥ ಮತ್ತು ಮಾಸ್ಕ್ಗಳನ್ನು ಒದಗಿಸುತ್ತಾ ಬಂದಿದ್ದಾರೆ.
ಬಡ ಕುಟುಂಬಗಳಿಗೆ ನೆರವು ನೀಡಿದ ಎಎಸ್‌ಐಗೆ ಪ್ರಶಂಸನಾ ಪತ್ರ ನೀಡಿದ ಎಸ್‌ಪಿ
ಹೆಚ್.ಡಿ.ಕೋಟೆ ಠಾಣೆಯ ಎಎಸ್‌ಐ ದೊರೆಸ್ವಾಮಿ ಅವರು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ತೊಂದರೆಗೀಡಾಗಿದ್ದ ಹೊರ ರಾಜ್ಯದ ಆಟೋ ರಿಕ್ಷಾ ಚಾಲಕರು, ಕೂಲಿ ಕಾರ್ಮಿಕರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಸ್ವಂತ ಉಳಿತಾಯ ಹಣದಿಂದ ಸುಮಾರು ಮೂರು ಸಾವಿರ ಕುಟುಂಬಗಳಿಗೆ ಅಗತ್ಯ ದಿನಸಿ ಪದಾರ್ಥಗಳು ಮತ್ತು ಮಾಸ್ಕ್ಗಳನ್ನು ಒದಗಿಸುತ್ತಾ ಬಂದಿದ್ದಾರೆ.
ಈ ವಿಷಯ ತಿಳಿದ ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ದೊರೆಸ್ವಾಮಿ ಅವರಿಗೆ ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದ್ದಾರೆ.