ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ತೆಂಗಿನ ಮರ ಬಿದ್ದು ಆಟವಾಡುತ್ತಿದ್ದ ಬಾಲಕ ಸಾವು - The six year old boy dead in Mysore

ಬಾಲಕನ ಮೈಮೇಲೆ ಯಮ ಸ್ವರೂಪಿ ತೆಂಗಿನ ಮರ ಬಿದ್ದು ಸಾವಿಗೆ ಕಾರಣ ಸಾವಿಗೆ ಮಗನನ್ನು ಕಳೆದುಕೊಂಡ ಹೆತ್ತಮ್ಮನ ಆಕ್ರಂದನ ಮುಗಿಲು ಮುಟ್ಟಿದೆ.

The  six year old boy dead in Mysore
ತೆಂಗಿನ ಮರ ಬಿದ್ದು ಆಟವಾಡುತ್ತಿದ್ದ ಬಾಲಕ ಸಾವು

By

Published : Jun 13, 2021, 12:35 PM IST

ಮೈಸೂರು:ಮನುಷ್ಯನಿಗೆ ಸಾವು ಎಲ್ಲಿ, ಹೇಗೆ ಬರುತ್ತದೋ ಗೊತ್ತಿಲ್ಲ.ಇದಕ್ಕೆ ಮೈಸೂರಿನಲ್ಲಿ ನಡೆದ ಈ ದುರಂತವೇ ಸಾಕ್ಷಿ.

ತೆಂಗಿನ ಮರ ಬಿದ್ದು ಆಟವಾಡುತ್ತಿದ್ದ ಬಾಲಕ ಸಾವಿಗೀಡಾಗಿದ್ದು ತಾಯಿಯ ಆಕ್ರಂದನ ಮನಕಲಕುವಂತಿತ್ತು.

ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಗ್ರಾಮದ ತೋಟದ ಮನೆಯ ಮುಂದೆ ಕ್ರಿಕೆಟ್ ಆಟವಾಡುತ್ತಿದ್ದ 6 ವರ್ಷದ ಬಾಲಕ ಅಭಯ್ ಮೇಲೆ ತೆಂಗಿನ ಮರ ಬಿದ್ದಿದೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಾಲಕನ ಜೊತೆ ಆಟವಾಡುತ್ತಿದ್ದ ಬಾಲಕಿ ಗಾಯಗೊಂಡಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆತ್ತಮ್ಮನ ಆಕ್ರಂದನ ಮುಗಿಲು ಮುಟ್ಟಿತ್ತು.

For All Latest Updates

TAGGED:

ABOUT THE AUTHOR

...view details