ಮೈಸೂರು: ಉದ್ಯಮಿ ಒಬ್ಬ ತನ್ನ ಕುಟುಂಬದ ನಾಲ್ವರನ್ನು ಕೊಲೆ ಮಾಡಿ ತಾನೂ ಗುಂಡಿಕ್ಕಿಗೊಂಡು ಆತ್ಮಹತ್ಯೆ ಪ್ರಕರಣಕ್ಕೆ ಸಾಲಬಾಧೆ ಜೊತೆಗೆ ಗಣಿ ಮಾಫಿಯಾ ಕಾರಣ ಇರಬಹುದು ಎಂಬ ಮಾತು ಕೇಳಿಬರುತ್ತಿವೆ. ಸ್ಥಳಕ್ಕೆ ಆಗಮಿಸಿದ ಮೃತ ಓಂ ಪ್ರಕಾಶ್ ಅಕ್ಕನಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
ಆತ್ಮಹತ್ಯೆಗೆ ಕಾರಣವೇನು?
ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ ಉದ್ಯಮಿ ಓಂ ಪ್ರಕಾಶ್, ಡಾಟಾ ಬೇಸ್ ಕಂಪನಿ ನಡೆಸುತ್ತಿದ್ದರು. ಲಾಸ್ ಆದ ನಂತರ ಆ ಕಂಪನಿಯನ್ನು ಮುಚ್ಚಿದ್ದರು. ಜೊತೆಗೆ ರಿಯಲ್ ಎಸ್ಟೇಟ್, ಅನಿಮೇಷನ್ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದರು. ಆದರೆ, ಇದೆಲ್ಲದಕ್ಕಿಂತ ಮುಂಚೆ ಬಳ್ಳಾರಿಯಲ್ಲಿ ಮೈನಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಇವರು, ಮೈನಿಂಗ್ ನಡೆಸಲು ಪರವಾನಗಿ ಪಡೆದಿದ್ದರು. ಅದಿರನ್ನು ವಿದೇಶಗಳಿಗೂ ರಫ್ತು ಮಾಡುತ್ತಿದ್ದರು ಎನ್ನಲಾಗುತ್ತಿದೆ.
ಮೃತ ಓಂ ಪ್ರಕಾಶ್ ಅಕ್ಕನಿಂದ ಪೊಲೀಸರು ಮಾಹಿತಿ ಮೈನಿಂಗ್ ಕಂಪನಿ ಮುಚ್ಚಿದ ನಂತರ ಸಂಕಷ್ಟಕ್ಕೆ ಸಿಲುಕಿದ್ದ ಓಂ ಪ್ರಕಾಶ್, ಆದಾಯ ತೆರಿಗೆ ಹಾಗೂ ಇಡಿಯಿಂದ ತನಿಖೆ ಸಹ ಎದುರಿಸುತ್ತಿದ್ದರಂತೆ. ಮೈನಿಂಗ್ ವ್ಯವಹಾರದಲ್ಲಿ ಈತನಿಗೆ ಭೂಗತ ಲೋಕದಿಂದ ಬೆದರಿಕೆ ಸಹ ಇತ್ತು ಎನ್ನಲಾಗಿದ್ದು, ಅದಕ್ಕಾಗಿ 3 ಜನ ಗನ್ಮ್ಯಾನ್ಗಳನ್ನು ಇಟ್ಟುಕೊಂಡಿದ್ದರು.
ಓಂ ಪ್ರಕಾಶ್ ಹಿನ್ನೆಲೆ :
ಮೈಸೂರಿಗೆ ಇಂಜಿನಿಯರಿಂಗ್ ವ್ಯಾಸಂಗ ಮಾಡಲು ಬಂದ ಓಂ ಪ್ರಕಾಶ್, ನಿಖಿತಾ ಅವರನ್ನು ಅಂತರ್ಜಾತಿ ವಿವಾಹವಾಗಿದ್ದರು. ವಿವಾಹದ ವಿಜಯನಗರದ ಬಳಿ ಬಾಡಿಗೆ ಮನೆಯೊಂದನ್ನು ಪಡೆದು ತಂದೆ ತಾಯಿಯರನ್ನು ಕರೆದುಕೊಂಡು ಬಂದಿದ್ದರು.
ನಂತರ ಇಲ್ಲಿ ಡಾಟಾ ಕಂಪನಿ ಸ್ಥಾಪನೆಯ ಜೊತೆ ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಮೈನಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಸ್ವಂತ ಮನೆಯನ್ನು ದಟ್ಟಗಳ್ಳಿಯಲ್ಲಿ ಖರೀದಿಸಿ ಅಲ್ಲಿಯೇ ವಾಸವಿದ್ದರು. ಮನೆಯ ಸುತ್ತಮುತ್ತ ಯಾರೊಂದಿಗೆ ಮಾತನಾಡುತ್ತಿರಲಿಲ್ಲ. ತಂದೆ ನಾಗರಾಜ್ ಭಟ್ಟಾಚಾರ್ಯ ಜೋತಿಷ್ಯ ಹೇಳುತ್ತಿದ್ದರು. ಈ ಮಧ್ಯೆ ಗಣಿ ವ್ಯವಹಾರದಲ್ಲಿ ಆದಾಯ ತೆರಿಗೆ ಹಾಗೂ ಇತರ ಕಡೆಯಿಂದ ವ್ಯಕ್ತವಾದ ಕಿರುಕುಳದಿಂದ ಮನನೊಂದಿದ್ದರು ಎಂದು ಮೃತ ಓಂ ಪ್ರಕಾಶ್ ಮಾವ ಶಾಂತರಾಮ್ ಈ ಟಿವಿ ಭಾರತ್ ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.