ಮೈಸೂರು: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಆದರೆ ಮೈಸೂರಿನ ನಂಜನಗೂಡು ಬಳಿಯ ಕಳಲೆ ಗ್ರಾಮದಲ್ಲಿ ಜನ ಗುಂಪು ಗುಂಪಾಗಿ ರೇಷನ್ ಅಂಗಡಿ ಮುಂದೆ ಕುಳಿತಿದ್ದ ಘಟನೆ ನಡೆದಿದೆ.
ನ್ಯಾಯಬೆಲೆ ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡ ಚೀಲಗಳು! - ನ್ಯಾಯಬೆಲೆ ಅಂಗಡಿ
ನ್ಯಾಯಬೆಲೆ ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲೆಂದು ಬಾಕ್ಸ್ ರಚಿಸಲಾಗಿತ್ತು. ಆದರೆ ತೀವ್ರ ಬಿಸಿಲಿದ್ದ ಕಾರಣ ಜನ ಅವರು ತಂದಿದ್ದ ಚೀಲವನ್ನು ಬಾಕ್ಸ್ನೊಳಗಿಟ್ಟು ಎಲ್ಲರೂ ನೆರಳಿನಲ್ಲಿ ಕುಳಿತಿದ್ದರು.

ನ್ಯಾಯ ಬೆಲೆ ಅಂಗಡಿ ಮುಂದೆ ಚೀಲಗಳ ಕ್ಯೂ: ಗುಂಪಾಗಿ ಕುಳಿತ ಜನ
ನ್ಯಾಯಬೆಲೆ ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲೆಂದು ಬಾಕ್ಸ್ ರಚಿಸಲಾಗಿತ್ತು. ಆದರೆ ತೀವ್ರ ಬಿಸಿಲಿದ್ದ ಕಾರಣ ಜನ ಅವರು ತಂದಿದ್ದ ಚೀಲಗಳನ್ನು ಬಾಕ್ಸ್ನೊಳಗೆ ಇಟ್ಟು, ಎಲ್ಲರೂ ನೆರಳಿನಲ್ಲಿ ಕುಳಿತಿದ್ದರು. ಬಳಿಕ ಅವರ ಸರತಿ ಬಂದಾಗ ಬಾಕ್ಸ್ನಲ್ಲಿಟ್ಟಿದ್ದ ಚೀಲಕ್ಕೆ ರೇಷನ್ ತುಂಬಿಸಿಕೊಂಡು ಮನೆಗೆ ತರಳಿದ್ದಾರೆ.