ಮೈಸೂರು:ಸಾರ್ವಜನಿಕರು ತಮ್ಮ ವ್ಯಯಕ್ತಿಕ ಕಾರ್ಯಗಳಿಗೆ ಮೂರೂವರೆ ಕೆಜಿ ಶ್ರೀಗಂಧವನ್ನು ಖರೀದಿಸಬಹುದು ಎಂದು ಡಿಸಿಎಫ್ ಡಾ.ಕೆ ಸಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಸಾರ್ವಜನಿಕರಿಗೆ 3 ಕೆಜಿ ವರೆಗೆ ಶ್ರೀಗಂಧ ಖರೀದಿಗೆ ಅವಕಾಶ: ಡಿಸಿಎಫ್ ಪ್ರಶಾಂತ್ ಕುಮಾರ್
ವೈಯಕ್ತಿಕ ಕಾರ್ಯಗಳಿಗೆ ಸಾರ್ವಜನಿಕರು 3 ಕೆಜಿಯ ವರೆಗೆ ಶ್ರೀಗಂಧವನ್ನು ಖರೀದಿಸಬಹುದು ಎಂದು ಡಿಸಿಎಫ್ ಡಾ.ಕೆ ಸಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಮೈಸೂರಿನ ಅರಣ್ಯ ಭವನದಲ್ಲಿ ಆರಂಭವಾಗಿರುವ ಶ್ರೀಗಂಧ ವಸ್ತು ಸಂಗ್ರಹಾಲಯದಲ್ಲಿ ಸಾರ್ವಜನಿಕರಿಗೆ ಶ್ರೀಗಂಧದ ಬಗ್ಗೆ ಅರಿವು ಮೂಡಿಸಲು, ರೈತರು ಶ್ರೀಗಂಧವನ್ನು ಬೆಳೆಯಲು ಪ್ರೋತ್ಸಾಹಿಸುವ ದೃಷ್ಟಿಯಿಂದ ಶ್ರೀಗಂಧದ ವಸ್ತು ಸಂಗ್ರಹಾಲಯವನ್ನು ಆರಂಭಿಸಿದ್ದು ಪ್ರತಿ ದಿನ ಸಾರ್ವಜನಿಕರಿಗೆ 10:30 ರಿಂದ 5 ಘಂಟೆಯ ವರೆಗೆ ಉಚಿತ ಪ್ರವೇಶವಿದ್ದು , ಈ ವಸ್ತು ಸಂಗ್ರಹಾಲಯದಲ್ಲಿ 20 ಬಗೆಯ ಶ್ರೀಗಂಧದ ಮರದ ತಳಿಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದು ಡಿಸಿಎಫ್ ತಿಳಿಸಿದರು.
ವೈಯಕ್ತಿಕ ಕಾರ್ಯಗಳಿಗೆ ಸಾರ್ವಜನಿಕರು 3 ಕೆಜಿಯ ವರೆಗೆ ಶ್ರೀಗಂಧವನ್ನು ಖರೀದಿಸಬಹುದಾಗಿದ್ದು, ಗುಣ ಮಟ್ಟಕ್ಕೆ ಅನುಸಾರವಾಗಿ ಬೆಲೆ ಇರುತ್ತದೆ. ಸಾಮಾನ್ಯವಾಗಿ ಪೂಜೆ ಕಾರ್ಯಗಳಿಗೆ ಬಳಸುವ ಶ್ರೀಗಂಧ ಒಂದು ಕೆಜಿಗೆ 8 ಸಾವಿರ ರೂಪಾಯಿ ಇಂದ ಆರಂಭವಾಗುತ್ತದೆ. ಶ್ರೀಗಂಧ ಖರೀದಿಗೆ ಯಾವುದಾದರೂ ಒಂದು ಗುರುತಿನ ಚೀಟಿ ಅವಶ್ಯಕವಾಗಿದ್ದು, ಆಧಾರ್ ಹಾಗೂ ಪಾನ್ ಕಡ್ಡಾಯವಲ್ಲ. ಎಂದು ಡಿಸಿಎಫ್ ಪ್ರಶಾಂತ್ ಕುಮಾರ್ ತಿಳಿಸಿದರು.