ಕರ್ನಾಟಕ

karnataka

ETV Bharat / state

ಆಧಾರ್ ಕೇಂದ್ರದ ಅವ್ಯವಸ್ಥೆ ವಿರುದ್ಧ ಪೋಸ್ಟ್ ಕಾರ್ಡ್ ಚಳುವಳಿ

ಮೈಸೂರಿನಲ್ಲಿ ಆಧಾರ್ ಕಾರ್ಡ್ ನೋಂದಣಿ ಮಾಡಿಸಲು ಸಾರ್ವಜನಿಕರು ಪರದಾಡುತ್ತಿದ್ದು, ಶೀಘ್ರವೇ ಇನ್ನೂ ಹೆಚ್ಚಿನ ಹೊಸ ಆಧಾರ್​ ಕಾರ್ಡ್​ ಕೇಂದ್ರಗಳನ್ನು ತೆರೆಯುವಂತೆ ಕನ್ನಡ ವೇದಿಕೆ ಕಾರ್ಯಕರ್ತರು ನಗರಪಾಲಿಕೆ ಮುಂಭಾಗ ಪೋಸ್ಟ್ ಕಾರ್ಡ್ ಚಳುವಳಿ ನಡೆಸಿದರು.

The post card movement against the chaos of the Adhar Center

By

Published : Aug 3, 2019, 7:58 PM IST

ಮೈಸೂರು: ಆಧಾರ್ ಕಾರ್ಡ್ ನೋಂದಣಿ ಮಾಡಿಸಲು ಸಾರ್ವಜನಿಕರು ಪರದಾಡುತ್ತಿದ್ದು, ಶೀಘ್ರವೇ ಹೊಸ ಕೇಂದ್ರಗಳನ್ನು ತೆರೆಯುವಂತೆ ಕನ್ನಡ ವೇದಿಕೆ ಕಾರ್ಯಕರ್ತರು ನಗರಪಾಲಿಕೆ ಮುಂಭಾಗ ಪೋಸ್ಟ್ ಕಾರ್ಡ್ ಚಳುವಳಿ ನಡೆಸಿದರು.

ಆಧಾರ್ ಕೇಂದ್ರದ ಅವ್ಯವಸ್ಥೆ ವಿರುದ್ಧದ ಪೋಸ್ಟ್ ಕಾರ್ಡ್ ಚಳುವಳಿ

ಜನರ ಪ್ರತಿಯೊಂದು ವ್ಯವಹಾರಕ್ಕೂ ಅಗತ್ಯವಾಗಿರುವ ಆಧಾರ್ ಕಾರ್ಡ್ ನೋಂದಣಿ ಮಾಡಿಸಲು ಕೆಲವು ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಅಲ್ಲಿ ದಿನಕ್ಕೆ ಇಂತಿಷ್ಟು ಜನರಿಗೆ ಮಾತ್ರ ಎಂದು ಸೀಮಿತಗೊಳಿಸಿರುವುದರಿಂದ ಸಾರ್ವಜನಿಕರು ಆಧಾರ್ ಕಾರ್ಡ್ ನೋಂದಣಿ ಮಾಡಿಸಲು ಪರದಾಡುತ್ತಿದ್ದು, ಅದಷ್ಟು ಬೇಗ ಹೆಚ್ಚಿನ ನೋಂದಣಿ ಕೇಂದ್ರವನ್ನು ತೆರೆಯಬೇಕು ಎಂದು ನಗರದ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಸೇರಿದ್ದ ಕನ್ನಡ ವೇದಿಕೆ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದರು.

ಈ ಅವ್ಯವಸ್ಥೆಯನ್ನು ಸರಿ ಪಡಿಸಬೇಕೆಂದು ಅಧಿಕಾರಿಗಳ ವಿರುದ್ದ ಆಗ್ರಹಿಸಿ ಪೋಸ್ಟ್ ಬಾಕ್ಸ್​ಗೆ ಪೋಸ್ಟ್ ಕಾರ್ಡ್ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.

ABOUT THE AUTHOR

...view details