ಮೈಸೂರು:ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಪಕ್ಷದ ಹೈಕಮಾಂಡ್ ಇನ್ನೂ ಯಾರ ಹೆಸರನ್ನೂ ಸೂಚಿಸಿಲ್ಲ. ಶನಿವಾರ ಬೆಳಗ್ಗೆ ಅವರು ಯಾರ ಹೆಸರನ್ನು ಸೂಚಿಸುತ್ತಾರೋ ಅವರಿಗೇ ಎಲ್ಲರೂ ಮತ ಹಾಕಬೇಕು ಎಂದು ಶಾಸಕ ಸಾ ರಾ ಮಹೇಶ್ ಹೇಳಿದ್ದಾರೆ.
ಹೈಕಮಾಂಡ್ ಯಾರನ್ನು ಸೂಚಿಸುತ್ತೋ ಅವರೇ ಮೇಯರ್.. ಸಾ ರಾ ಮಹೇಶ್
ಖಾಸಗಿ ಹೋಟೆಲ್ನಲ್ಲಿ ತಮ್ಮ ಪಕ್ಷದ ನಗರ ಪಾಲಿಕೆ ಸದಸ್ಯರೊಂದಿಗೆ ಮಾತನಾಡಿದ ಅವರು, ನಗರ ಪಾಲಿಕೆಯ ಸದಸ್ಯರು ಯಾರ ಹೆಸರನ್ನ ಸೂಚಿಸುತ್ತಾರೋ ಅವರ ಹೆಸರನ್ನೇ ಹೈಕಮಾಂಡ್ ತಿಳಿಸುತ್ತೆ. ಅವರು ಸೂಚಿಸಿದ ವ್ಯಕ್ತಿಯೇ ಮೈಸೂರು ಮೇಯರ್ ಆಗಲಿದ್ದಾರೆ ಎಂದರು.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ತಮ್ಮ ಪಕ್ಷದ ನಗರ ಪಾಲಿಕೆ ಸದಸ್ಯರೊಂದಿಗೆ ಮಾತನಾಡಿದ ಅವರು, ನಗರ ಪಾಲಿಕೆಯ ಸದಸ್ಯರು ಯಾರ ಹೆಸರನ್ನ ಸೂಚಿಸುತ್ತಾರೋ ಅವರ ಹೆಸರನ್ನೇ ಹೈಕಮಾಂಡ್ ತಿಳಿಸುತ್ತೆ. ಅವರು ಸೂಚಿಸಿದ ವ್ಯಕ್ತಿಯೇ ಮೈಸೂರು ಮೇಯರ್ ಆಗಲಿದ್ದಾರೆ ಎಂದರು.
ನರೇಂದ್ರ ಮೋದಿ ಪ್ರಧಾನಿಯಾದ ನಂತರ ಯಾವುದೇ ಕಾರಣಕ್ಕೂ ಅವರ ಅರಿವಿಗೆ ಇಲ್ಲದೆ ಸಭೆ ಮಾಡುವಂತಿಲ್ಲ. ಈ ರೀತಿಯ ಪರಿಸ್ಥಿತಿ ಬಿಜೆಪಿಯಲ್ಲಿ ನಿರ್ಮಾಣವಾಗಿದೆ. ಆದರೆ, ನಮ್ಮಲ್ಲಿ ಹಾಗಿಲ್ಲ. ನೀವು ವಾರದಲ್ಲಿ 5 ದಿನ ಕ್ಷೇತ್ರದ ವಾರ್ಡ್‌ನ ಸಮಸ್ಯೆಗೆ ಸಮಯ ನೀಡಿ. ಇನ್ನುಳಿದ 2 ದಿನವನ್ನ ಪಕ್ಷ ಸಂಘಟನೆಗೆ ಒತ್ತು ನೀಡಿ ಎಂದು ಪಕ್ಷದವರಿಗೆ ಮನವಿ ಮಾಡಿದರು.