ಮೈಸೂರು :ವೈಯಕ್ತಿಕ ದ್ವೇಷಕ್ಕೆ ನ್ಯಾಯಬೆಲೆ ಅಂಗಡಿ ಮಾಲೀಕನೋರ್ವ, ಗ್ರಾಮದ ಹಲವು ಜನರ ಬಿಪಿಎಲ್ ಕಾರ್ಡ್ನ ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸಿರುವ ಘಟನೆ ಸರಗೂರು ತಾಲೂಕಿನ ಕಟ್ಟೆಹುಣಸೂರಿನಲ್ಲಿ ನಡೆದಿದೆ.
ವೈಯಕ್ತಿಕ ದ್ವೇಷಕ್ಕೆ ಬಡವರ ಅನ್ನ ಕಿತ್ತುಕೊಂಡ ನ್ಯಾಯಬೆಲೆ ಅಂಗಡಿ ಮಾಲೀಕ - mysore news
ನಮಗೆ ಕೊರೊನಾ ಸಮಯದಲ್ಲಿಯೂ ಅಕ್ಕಿ ಸಿಗದೆ ಕಷ್ಟ ಅನುಭವಿಸಿದ್ದೇವೆ. ಈಗಲೂ ಇವರು ತಮ್ಮ ವೈಯಕ್ತಿಕ ದ್ವೇಷದಿಂದ ನಮ್ಮ ಜೀವನವನ್ನು ನಾಶ ಮಾಡುತ್ತಿದ್ದಾರೆ. ನಮಗೆ ಕೂಡಲೇ ನ್ಯಾಯ ದೊರಕಿಸಿ ಕೊಡಿ ಎಂದು ಕಾರ್ಡ್ ಕಳೆದುಕೊಂಡವರು ಅಧಿಕಾರಿಗಳಿಗೆ ಮನವಿ..
ನ್ಯಾಯಬೆಲೆ ಅಂಗಡಿಯ ಮಾಲೀಕರಾದ ಕಮಲಮ್ಮ ಹಾಗೂ ಚಂದ್ರಶೇಖರ್ ಎಂಬ ದಂಪತಿ ಇಂತಹ ಕೆಲಸ ಮಾಡಿದ್ದಾರೆ ಎಂಬ ಆರೋಪ ಗ್ರಾಮಸ್ಥರದಾಗಿದೆ. ಇವರ ದ್ವೇಷಕ್ಕೆ 20ಕ್ಕೂ ಹೆಚ್ಚು ಕುಟುಂಬ ಬೀದಿಗೆ ಬಂದಿವೆ. ನಮ್ಮ ಪಡಿತರ ಕಾರ್ಡ್ಗಳನ್ನ ಇವರು ಉದ್ದೇಶ ಪೂರ್ವಕವಾಗಿ ಬದಲಾವಣೆ ಮಾಡಿಸಿದ್ದಾರೆ. ಇವರು ಮಾಡಿರುವ ಕೆಲಸದಿಂದ ನಾವು ಬೀದಿಗೆ ಬಂದಿದ್ದೇವೆ ಎಂದು ನೊಂದವರ ಆಕ್ರೋಶವಾಗಿದೆ.
ನಮಗೆ ಕೊರೊನಾ ಸಮಯದಲ್ಲಿಯೂ ಅಕ್ಕಿ ಸಿಗದೆ ಕಷ್ಟ ಅನುಭವಿಸಿದ್ದೇವೆ. ಈಗಲೂ ಇವರು ತಮ್ಮ ವೈಯಕ್ತಿಕ ದ್ವೇಷದಿಂದ ನಮ್ಮ ಜೀವನವನ್ನು ನಾಶ ಮಾಡುತ್ತಿದ್ದಾರೆ. ನಮಗೆ ಕೂಡಲೇ ನ್ಯಾಯ ದೊರಕಿಸಿ ಕೊಡಿ ಎಂದು ಕಾರ್ಡ್ ಕಳೆದುಕೊಂಡವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಕಮಲಮ್ಮ ಹಾಗೂ ಚಂದ್ರಶೇಖರ್ ದಂಪತಿ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.