ಕರ್ನಾಟಕ

karnataka

ETV Bharat / state

ಕೋವಿಡ್ ನಂತರ ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ: 42 ದಿನಗಳಲ್ಲಿ ಕೋಟಿ, ಕೋಟಿ ಆದಾಯ - ಕೋವಿಡ್ ನಂತರ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರ

ಡಿಸೆಂಬರ್ 17 ರಿಂದ ಜ.27 ರವರೆಗೆ 42 ದಿನದಲ್ಲಿ 1,33,25,302 ರೂ ಕಾಣಿಕೆ ಸಂಗ್ರಹವಾಗಿದೆ. ಚಿನ್ನ 253 ಗ್ರಾಂ, ಬೆಳ್ಳಿ 810 ಗ್ರಾಂ ಸಂಗ್ರಹವಾಗಿದೆ. ಭಕ್ತರ ಸಂಖ್ಯೆ ಹೆಚ್ಚಾದಾಂತ, ಕಾಣಿಕೆಯ ಮೊತ್ತ ಹೆಚ್ಚಾಗಿದೆ.

the-number-of-devotees-increased-to-chamundi-hills-after-covid
ಕೋವಿಡ್ ನಂತರ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರ

By

Published : Jan 29, 2021, 12:37 PM IST

ಮೈಸೂರು : ಚಾಮುಂಡಿ ಬೆಟ್ಟಕ್ಕೆ ಲಾಕ್ ಡೌನ್ ಬಳಿಕ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, 42 ದಿನಗಳಲ್ಲಿ ಕಾಣಿಕೆ ಹುಂಡಿಯಲ್ಲಿ ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ .

ಕೋವಿಡ್ ನಂತರ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರ

ಲಾಕ್​​​​ಡೌನ್ ಬಳಿಕ ಚಾಮುಂಡಿ ಕಾಣಿಕೆಯಲ್ಲಿ ಸುಧಾರಣೆಯಾಗಿದ್ದು, ಚಾಮುಂಡೇಶ್ವರಿ ದೇವಸ್ಥಾನದಲ್ಲಿ 1,33,25,302 ರೂ. ಕಾಣಿಕೆ ಸಂಗ್ರಹವಾಗಿದೆ. ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ 60ಕ್ಕೂ ಹೆಚ್ಚು ಮಂದಿಯಿಂದ ಹುಂಡಿ ಎಣಿಕೆ ಮಾಡಲಾಯಿತು. ಕೊರೊನಾ ಕಡಿಮೆಯಾಗುತ್ತಿದ್ದಂತೆ ಚಾಮುಂಡಿ ಬೆಟ್ಟಕ್ಕೆ ಭಕ್ತರ ಆಗಮನ ಹೆಚ್ಚಾಗಿದೆ.

ಡಿಸೆಂಬರ್ 17 ರಿಂದ ಜ.27 ರವರೆಗೆ 42 ದಿನದಲ್ಲಿ 1,33,25,302 ರೂ ಕಾಣಿಕೆ ಸಂಗ್ರಹವಾಗಿದೆ. ಚಿನ್ನ 253 ಗ್ರಾಂ, ಬೆಳ್ಳಿ 810 ಗ್ರಾಂ ಸಂಗ್ರಹವಾಗಿದೆ. ಭಕ್ತರ ಸಂಖ್ಯೆ ಹೆಚ್ಚಾದಂತೆ, ಕಾಣಿಕೆಯ ಮೊತ್ತ ಕೂಡಾ ಹೆಚ್ಚಾಗಿದೆ.

ಓದಿ : ಮುಂದುವರಿದ "ಮಹಾ" ಪುಂಡಾಟಿಕೆ : KSRTC ಬಸ್ ಮೇಲೆ ಮರಾಠಿ ಪೋಸ್ಟರ್ ಅಂಟಿಸಿದ ಪುಂಡರು

For All Latest Updates

TAGGED:

ABOUT THE AUTHOR

...view details