ಮೈಸೂರು:ಮುಂಗಾರು ಮುನುಸಿಕೊಂಡಿರುವುದರಿಂದ ಅನ್ನದಾತ ಕಂಗಾಲಾಗಿದ್ದಾನೆ. ಈ ವೇಳೆಯಲ್ಲಿ ನೇಗಿಲಯೋಗಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೌದು, ವಾಡಿಕೆಯಂತೆ ಜೂನ್ ಆರಂಭದಲ್ಲಿಯೇ ಮುಂಗಾರು ಆರಂಭಗೊಂಡು ಕೃಷಿಕರೆಲ್ಲ ಬಿತ್ತನೆ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕಾಗಿತ್ತು.
ಕೈ ಕೊಟ್ಟ ಮಳೆ: ನುಗು ಜಲಶಾಯದಿಂದ ನಾಲೆಗಳಿಗೆ ನೀರು ಬಂದ್ - ಮಳೆ
ಮುಂಗಾರು ಕೈಕೊಟ್ಟ ಹಿನ್ನಲೆ ಜಲಾಶಯಗಳಿಂದ ನಾಲೆಗಳಿಗೆ ಹರಿಸುವ ನೀರು ಬಂದ್ ಮಾಡಲಾಗಿದೆ.
ಆದರೆ, ಮುಂಗಾರು ಕೈಕೊಟ್ಟಿರುವುದರಿಂದ ಜಲಾಶಯಗಳಿಂದ ನಾಲೆಗಳಿಗೆ ನೀರು ಬಿಡುತ್ತಿಲ್ಲ.ಇದರಿಂದ ಗಾಯದ ಮೇಲೆ ಉಪ್ಪು ಸವರಿದ ರೀತಿಯ ಸ್ಥಿತಿ ಅನ್ನದಾತನಿಗಾಗಿದೆ.
ಸರಗೂರು ತಾಲೂಕಿನ ನುಗು ಜಲಾಶಯ ಕಾವೇರಿ ಕೊಳ್ಳದ ಭಾಗದ ಜಲಾಶಯಗಳಲ್ಲಿ ಅತ್ಯಂತ ಎತ್ತರದ ಜಲಾಶಯವಾಗಿದೆ. ಈ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುತ್ತಿದ್ದರಿಂದ ಆ ಭಾಗದ 40ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರಿನ ಉಪಯೋಗವಾಗುತ್ತಿತ್ತು. ಕೃಷಿಗೆ ಅಲ್ಲದೆ ಜಾನುವಾರುಗಳ ನೀರಿನ ಅಭಾವ ಕೂಡ ನೀಗುತ್ತಿತ್ತು.
ಇದೀಗ ಮುಂಗಾರು ಕೈಕೊಟ್ಟ ಹಿನ್ನಲೆ ಜಲಾಶಯಗಳಿಂದ ನಾಲೆಗಳಿಗೆ ಹರಿಸುವ ನೀರು ಬಂದ್ ಮಾಡಲಾಗಿದೆ. ಮಳೆ ಕೈ ಕೊಟ್ಟ ನಂತರ ನಾಲೆ ನೀರನ್ನ ನಂಬಿ ಅನ್ನದಾತರು ಕಾಳು ಕಡ್ಡಿ ಬೆಳೆಯಲು ಮುಂದಾಗಿದ್ರು. ಆದರೆ ಆ ಆಲೋಚನೆಗಳಿಗೂ ತಣ್ಣೀರು ಎರಚುವಂತಹ ಪರಿಸ್ಥಿತಿ ಎದುರಾಗಿದೆ. ಮುಂಗಾರು ಬೆಳೆಗೆ ಈ ದುಸ್ಥಿತಿ ಬಂದಿದೆ. ಒಂದ್ವೇಳೆ ಜುಲೈನಲ್ಲಿ ಮತ್ತೆ ಮಳೆ ಕೈಕೊಟ್ಟರೆ ಹಿಂಗಾರು ಬೆಳೆಗೆ ನಮ್ಮ ಗತಿ ಏನು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.