ಕರ್ನಾಟಕ

karnataka

ETV Bharat / state

ಕೋವಿಡ್ ವಾರ್ ರೂಂನ ನಿರ್ಲಕ್ಷ್ಯ ಆರೋಪ: ಬೆಡ್​ ಸಿಗದೇ ಪೌರ ಕಾರ್ಮಿಕ ಸಾವು - neglect of the Covid

ಕಳೆದ 4 ದಿನಗಳಿಂದ ಕೋವಿಡ್ ವಾರ್ ರೂಂ ಲ್ಯಾಂಡ್ ಲೈನ್ ಹಾಗೂ ವ್ಯಾಟ್ಸ್​​ಆ್ಯಪ್​ ನಂಬರ್​ಗೆ ಸತತ ಮಾಹಿತಿ‌ ನೀಡಿದರು. ಇಲ್ಲಿಯವರೆಗೆ ನಮಗೆ ಬೆಡ್ ಸಿಕ್ಕಿಲ್ಲ‌‌. ಇಂದಿಗೂ ಸಹ ವಾರ್ ರೂಂ ಸರಿಯಾಗಿ ವೆಂಟಿಲೇಟರ್ ಬೆಡ್ ಬಗ್ಗೆ ಮಾಹಿತಿ‌ ನೀಡುತ್ತಿಲ್ಲ ಎಂದು ಪೌರಕಾರ್ಮಿಕ ಸಂಘದ ಉಪಾಧ್ಯಕ್ಷ ಕುಮಾರ ಸ್ವಾಮಿ‌ ಆರೋಪಿಸಿದ್ದಾರೆ.

ಪೌರ ಕಾರ್ಮಿಕ ಸಾವು
ಪೌರ ಕಾರ್ಮಿಕ ಸಾವು

By

Published : May 18, 2021, 8:18 PM IST

ಮೈಸೂರು:ಕೋವಿಡ್ ವಾರ್ ರೂಂನ ನಿರ್ಲಕ್ಷ್ಯದಿಂದ ಪಾಲಿಕೆಯಲ್ಲಿ ಫಾಗಿಂಗ್ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕನೊಬ್ಬ ಕೋವಿಡ್​ಗೆ ಬಲಿಯಾಗಿದ್ದಾನೆ ಎಂದು ಪೌರಕಾರ್ಮಿಕ ಸಂಘದ ಉಪಾಧ್ಯಕ್ಷ ಕುಮಾರ ಸ್ವಾಮಿ‌ ಆರೋಪಿಸಿದ್ದಾರೆ.

ವಿನೋದ್ ಕುಮಾರ್( 28) ಕೋವಿಡ್​ಗೆ ಬಲಿಯಾದ ಪೌರಕಾರ್ಮಿಕ. ಈತನಿಗೆ ವೆಂಟಿಲೇಟರ್ ಬೆಡ್ ಸಿಗದೇ ಸಾವನ್ನಪ್ಪಿದ್ದು, ಇದಕ್ಕೆ ಕೋವಿಡ್ ವಾರ್ ರೂಂನ ನಿರ್ಲಕ್ಷ್ಯವೇ ಕಾರಣ ಎಂದು ಕುಮಾರ ಸ್ವಾಮಿ‌ ಆರೋಪಿಸಿದ್ದಾರೆ.

ಕಳೆದ 4 ದಿನಗಳಿಂದ ಕೋವಿಡ್ ವಾರ್ ರೂಂ ಲ್ಯಾಂಡ್ ಲೈನ್ ಹಾಗೂ ವ್ಯಾಟ್ಸಪ್ ನಂಬರ್​ಗೆ ಸತತ ಮಾಹಿತಿ‌ ನೀಡಿದರು, ಇಲ್ಲಿಯವರೆಗೆ ನಮಗೆ ಬೆಡ್ ಸಿಕ್ಕಿಲ್ಲ‌‌. ಇಂದಿಗೂ ಸಹ ವಾರ್ ರೂಂ ಸರಿಯಾಗಿ ವೆಂಟಿಲೇಟರ್ ಬೆಡ್ ಬಗ್ಗೆ ಮಾಹಿತಿ‌ ನೀಡುತ್ತಿಲ್ಲ. ಬೆಡ್ ಸಿಕ್ಕಿದ್ದರೆ ವಿನೋದ್ ಕುಮಾರ್ ಉಳಿಯುತ್ತಿದ್ದ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಡ್​ ಸಿಗದೇ ಪೌರ ಕಾರ್ಮಿಕ ಸಾವು ಆರೋಪ

ಪ್ರತಿಭಟನೆ ಮಾಡುವುದಿಲ್ಲ, ಕೆಲಸ ನಿಲ್ಲಿಸುತ್ತೇವೆ :ಕೊರೊನಾ ವಾರಿಯರ್​ಗಳಗೇ ಬೆಡ್ ಇಲ್ಲದೆ, ವಿಶೇಷ ಚಿಕಿತ್ಸೆ ಇಲ್ಲದೆ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಾರಣ ಯಾರು? ನಾಳೆ ಸಭೆ ಸೇರಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಳುತ್ತೇವೆ. ಇಲ್ಲದಿದ್ದರೆ ಗುರುವಾರದಿಂದ 2,500 ಜನ ಪೌರಕಾರ್ಮಿಕರು ಪ್ರತಿಭಟನೆ ಮಾಡುವುದಿಲ್ಲ ಬದಲಾಗಿ ಯಾರೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪೌರಕಾರ್ಮಿಕ ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ ಹೇಳಿದರು.

ABOUT THE AUTHOR

...view details