ಕರ್ನಾಟಕ

karnataka

ETV Bharat / state

ದಸರಾ ಮೇಲೆ ಉಗ್ರರ ಕರಿ ನೆರಳು ಸುಳ್ಳು ಸುದ್ದಿ.. ಮೈಸೂರು ನಗರ ಪೊಲೀಸ್​ ಆಯುಕ್ತರ ಸ್ಪಷ್ಟನೆ - militant black shadow on Dasara is false news

ಮೈಸೂರು ದಸರಾ ಮೇಲೆ ಉಗ್ರರ ಕರಿ ನೆರಳು ಬಿದ್ದಿದೆ ಎಂಬ ಸುದ್ದಿಯೇ ಸುಳ್ಳು. ಉಗ್ರ ಚಟುವಟಿಕೆ ನಡೆಸಲು ಬಂದ ವ್ಯಕ್ತಿಗಳನ್ನು ಬಂದಿಸಿಲ್ಲ ಎಂದು ಮೈಸೂರು ನಗರ ಪೊಲೀಸ್ ಕಮಿಷನರ್ ಕೆ ಟಿ ಬಾಲಕೃಷ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೈಸೂರು ನಗರ ಪೊಲೀಸ್ ಕಮಿಷನರ್ ಕೆ.ಟಿ. ಬಾಲಕೃಷ್ಣ

By

Published : Oct 6, 2019, 10:06 PM IST

ಮೈಸೂರು:ದಸರಾದ ಮೇಲೆ ಉಗ್ರರ ಕರಿ ನೆರಳು ಬಿದ್ದಿದೆ ಎಂಬ ಸುದ್ದಿಯೇ ಸುಳ್ಳು, ಈ ರೀತಿ ಯಾವುದೇ ಘಟನೆ ನಡೆದಿಲ್ಲ. ಯಾರನ್ನೂ ಬಂಧಿಸಿಲ್ಲ ಎಂದು ಮೈಸೂರು ನಗರ ಪೊಲೀಸ್ ಕಮಿಷನರ್ ಕೆ ಟಿ ಬಾಲಕೃಷ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ದಸರಾ ಹಿನ್ನೆಲೆಯಲ್ಲಿ 4 ಜನ ಉಗ್ರ ಚಟುವಟಿಕೆ ನಡೆಸಲು ಬಂದ ವ್ಯಕ್ತಿಗಳನ್ನು ಬಂದಿಸಿಲ್ಲ. ಈ ತರಹದ ಘಟನೆಯೇ ನಡೆದಿಲ್ಲ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸುಳ್ಳು. ದಯವಿಟ್ಟು ಈ ರೀತಿಯ ಸುದ್ದಿಗಳನ್ನು ಪ್ರಕಟಿಸುವ ಮೊದಲು ನಗರ ಪೊಲೀಸ್ ಕಮಿಷನರ್ ಅವರನ್ನು ಸಂಪರ್ಕಿಸಿ. ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳು ಬರುವ ಸಂದರ್ಭದಲ್ಲಿ ಅತಿ ಹೆಚ್ಚು ತಪಾಸಣೆ ಇರುತ್ತದೆ ಎಂದರು.

ಮೈಸೂರು ನಗರ ಪೊಲೀಸ್ ಕಮಿಷನರ್ ಕೆ ಟಿ ಬಾಲಕೃಷ್ಣ..

ಜಂಬೂಸವಾರಿ ಮೆರವಣಿಗೆಗೆ ಮೈಸೂರು ಹಾಗೂ ಇತರ ಎಲ್ಲಾ ಕಡೆಯಿಂದ 6000 ಸಾವಿರ ಸಿವಿಲ್ ಪೊಲೀಸ್ ಕೆಎಸ್‌ಆರ್‌ಪಿ, ‌ಸಿಆರ್‌ ತುಕಡಿ, ಕಮಾಂಡೋ ಪಡೆ ಇರುತ್ತದೆ. ಅರಮನೆಯ ಒಳಗೆ 157 ಸಿಸಿಟಿವಿ ಕ್ಯಾಮೆರಾ, ಜಂಬೂಸವಾರಿ ನಡೆಯುವ ಮಾರ್ಗದಲ್ಲಿ 323 ಸಿಸಿಟಿವಿ ಹಾಗೂ 300ಕ್ಕೂ ಹೆಚ್ಚು ಖಾಸಗಿ ಅಂಗಡಿಯವರು ಸಿಸಿಟಿವಿ ಅಳವಡಿಸಿದ್ದಾರೆ. ಜಂಬೂಸವಾರಿ ನಡೆಯುವ ಮಾರ್ಗದಲ್ಲಿ 3 ದ್ರೋಣ್ ಕ್ಯಾಮೆರಾಗಳನ್ನು ಅಡವಳಿಸಲಾಗಿದೆ ಎಂದರು.

ABOUT THE AUTHOR

...view details