ಕರ್ನಾಟಕ

karnataka

ETV Bharat / state

ಹೂಳೆತ್ತದೆ ಜೋಂಡಿನಿಂದ ಆವರಿಸಿದ ಕೆರೆ : ನೀರಿಲ್ಲದೆ ಜಾನುವಾರಗಳ ಪರದಾಟ - ಎಕರೆ

ದಳವಾಯಿ ಕೆರೆಯ ಹೂಳೆತ್ತದೆ ಜೋಂಡು ವ್ಯಾಪ್ತಿಸಿದ್ದು, ಕೆರೆಯಲ್ಲಿ ನೀರು ಇದ್ದು ಇಲ್ಲದಂತಾಗಿದೆ.

ದಳವಾಯಿ ಕೆರೆಯ ಹೂಳೆತ್ತೆದೆ ಜೋಂಡು ವ್ಯಾಪ್ತಿಸಿದೆ

By

Published : Mar 23, 2019, 3:23 AM IST

ಮೈಸೂರು: ಇದು ನೀರು ತುಂಬಿದ ಕೆರೆ, ಬೇಸಿಗೆಯಾದರೂ ಬತ್ತಿಲ್ಲ, ಆದರೆ ನೀರಿನ ಉಪಯೋಗ ಯಾರಿಗೂ ಇಲ್ಲದಂತಾಗಿದೆ.

ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ದಳವಾಯಿ ಕೆರೆ 150 ಎಕರೆ ಪ್ರದೇಶವನ್ನು ಹೊಂದಿದೆ. ಬೇಸಿಗೆ ಕಾಲದಲ್ಲಿಯೂ ತಳಮಟ್ಟದಲ್ಲಿ ನೀರು ನಿಂತು ಜಾನುವಾರುಗಳಿಗೆ ಹಾಗೂ ಪಕ್ಷಿಗಳಿಗೆ ನೆರವಾಗುತ್ತಿತ್ತು.

ದಳವಾಯಿ ಕೆರೆಯ ಹೂಳೆತ್ತೆದೆ ಜೋಂಡು ವ್ಯಾಪ್ತಿಸಿದೆ

ಆದರೆ, ಕಳೆದ ಆರು ತಿಂಗಳಿನಿಂದ ಕೆರೆಯಲ್ಲಿನ ಹೂಳೆತ್ತೆದೆ ಜೋಂಡು ವ್ಯಾಪ್ತಿಸಿದ್ದು, ಕೆರೆಯಲ್ಲಿ ನೀರು ಇದ್ದು ಇಲ್ಲವಾದಂತಾಗಿದೆ. ಸುತ್ತಮುತ್ತಲಿನ ಗ್ರಾಮದ ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿತ್ತು. ಆದರೆ, ಜೋಂಡು ಆವರಿಸಿಕೊಂಡಿರುವುದರಿಂದ ನೀರು ಇದ್ದರೂ ಇಲ್ಲದಂತಾಗಿದೆ. ಈ ಬಗ್ಗೆ ಗ್ರಾಮಸ್ಥರು ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲವಂತೆ.

ABOUT THE AUTHOR

...view details