ಕರ್ನಾಟಕ

karnataka

ETV Bharat / state

ಬೇರೆ ಜಿಲ್ಲೆ, ರಾಜ್ಯಗಳಿಗೆ ಮಾರಾಟಕ್ಕೆ ತೆರಳಲು ರೈತರಿಗೆ ಹಸಿರು ಪಾಸ್‌ ವಿತರಣೆ - ಕೃಷಿ ಸಚಿವ ಬಿಸಿಪಾ - ರೈತರ ಸಂಚಾರಕ್ಕೆ ಹಸಿರು ಪಾಸ್

ಅಗತ್ಯಕ್ಕೆ ಮಾತ್ರ ಪಾಸ್ ನೀಡಲಾಗುವುದು. ಅನಗತ್ಯ ಸಂಚಾರಕ್ಕೆ ಯಾವುದೇ ಪಾಸ್ ನೀಡುವುದಿಲ್ಲ. ರೈತರು ಬೆಳೆಯನ್ನು ನಾಶ ಮಾಡಬಾರದು ಎಂದು ಇದೇ ವೇಳೆ ಸಚಿವರು ಮನವಿ ಮಾಡಿದರು.

ಬಿ.ಸಿ.ಪಾಟೀಲ್
ಬಿ.ಸಿ.ಪಾಟೀಲ್

By

Published : Apr 11, 2020, 12:51 PM IST

ಮೈಸೂರು: ರೈತರ ಸಂಚಾರಕ್ಕೆ ಹಸಿರು ಪಾಸ್​ಗಳನ್ನು ನೀಡಲಾಗುವುದು. ಇದರಿಂದಾಗಿ ರೈತರು ಜಿಲ್ಲೆ ಹಾಗೂ ಅಂತರ್​ರಾಜ್ಯಗಳಿಗೆ ತರಕಾರಿ ಮಾರಾಟ ಮಾಡಲು ಹೋಗಬಹುದು ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು‌.

ನಗರದಲ್ಲಿ ಮಾತನಾಡಿದ ಅವರು, ಕೇರಳದ ಗಡಿಯಲ್ಲಿ ಹೆಚ್ಚು ಕೊರೊನಾ ಸೋಂಕು ಇರುವುದರಿಂದ ರಾಜ್ಯಕ್ಕೆ ಕೇರಳದಿಂದ ಸಂಪರ್ಕಿಸುವ ಚೆಕ್ ಪೋಸ್ಟ್ ತೆರೆಯುವುದಿಲ್ಲ. ವಾಹನಗಳ ಸಂಚಾರವೂ ಇರಲ್ಲ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಿಸಿ ಪಾಟೀಲ್​​

ರೈತರಿಗೆ ನೀಡುವ ಹಸಿರು ಪಾಸ್​ಗಳನ್ನು ಬಳಸಿ ಅಂತರ್​ರಾಜ್ಯಗಳಿಗೆ ತರಕಾರಿ ಮಾರಾಟ ಮಾಡಲು ಹೋಗಬಹುದು. ಅಗತ್ಯಕ್ಕೆ ಮಾತ್ರ ಪಾಸ್ ನೀಡಲಾಗುವುದು. ಅನಗತ್ಯ ಸಂಚಾರಕ್ಕೆ ಯಾವುದೇ ಪಾಸ್ ನೀಡುವುದಿಲ್ಲ. ರೈತರು ಬೆಳೆಯನ್ನು ನಾಶ ಮಾಡಬಾರದು ಎಂದು ಇದೇ ವೇಳೆ ಮನವಿ ಮಾಡಿದರು.

ರೈತರ ಬೆಳೆಗಳನ್ನು ಈಗಾಗಲೇ ಹಾಪ್​ಕಾಮ್ಸ್​ಗಳಲ್ಲಿ ಖರೀದಿ ಮಾಡಲಾಗುತ್ತಿದೆ. ಬೆಂಬಲ ಬೆಲೆ ನೀಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೀನಿ‌. ತರಕಾರಿ ಕೆಡದಂತೆ ಇಡಲು ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಲಾಗುವುದು ಎಂದರು. ಜುಬಲಿಯಂಟ್ ಪ್ರಕರಣದಿಂದ ನಂಜನಗೂಡಿಗೆ ಯಾರೂ ಹೋಗುತ್ತಿಲ್ಲ. ಜಿಲ್ಲೆಯ ಕೃಷಿ ಇಲಾಖೆ ಸಿಬ್ಬಂದಿಯೇ ಮನೆಮನೆಗೆ ತರಕಾರಿ ಸಾಗಿಸುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.

ABOUT THE AUTHOR

...view details