ಕರ್ನಾಟಕ

karnataka

ETV Bharat / state

ಚೇತರಿಸಿಕೊಳ್ಳದ ಹೋಟೆಲ್ ಉದ್ಯಮ: ಹೋಟೆಲ್ ಮಾಲೀಕರಿಂದ ಬೇಸರ - Mysore

ಲಾಕ್​ಡೌನ್ ನಂತರ ಆರಂಭವಾದ ಹೋಟೆಲ್ ಉದ್ಯಮ ಚೇತರಿಸಕೊಳ್ಳದೇ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಂಡಿದ್ದು, ಹೋಟೆಲ್ ಉದ್ಯಮ‌ ಮೇಲೆ ಏಳಲು 2021 ರ ಮಾರ್ಚ್​ ವರೆಗೆ ಕಾಯಬೇಕು ಅದು ಗ್ಯಾರಂಟಿ ಇಲ್ಲ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

problem in the hotel industry from Corona
ಹೋಟೆಲ್ ಉದ್ಯಮದ ಸಮಸ್ಯೆ

By

Published : Oct 26, 2020, 6:14 PM IST

ಮೈಸೂರು: ಲಾಕ್​ಡೌನ್ ನಂತರ ಆರಂಭವಾದ ಹೋಟೆಲ್ ಉದ್ಯಮ ಚೇತರಿಸಕೊಳ್ಳದೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡು ಮಲಗಿದೆ. ಇದು ಚೇತರಿಸಿಕೊಳ್ಳಲು 6 ತಿಂಗಳು ಬೇಕು ಎಂದು ಹೋಟೆಲ್ ಮಾಲೀಕರು ‌ಹೇಳಿದ್ದಾರೆ.

ಪ್ರವಾಸೋದ್ಯಮ ನಗರಿ ಖ್ಯಾತಿಯ ಸಾಂಸ್ಕೃತಿಕ ನಗರಿ ಪ್ರವಾಸೋದ್ಯಮವನ್ನೇ ನಂಬಿ ಬದುಕುವ ನಗರವಾಗಿದ್ದು, ಪ್ರತಿ ವರ್ಷ ವಿದೇಶ ದೇಶ ಹಾಗೂ ಇತರ ರಾಜ್ಯಗಳಿಂದ ಅಂದಾಜು 30 ಲಕ್ಷ ಜನ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಮೈಸೂರು ನಗರದಲ್ಲೇ ಹೋಟೆಲ್, ರೆಸ್ಟೋರೆಂಟ್, ಸಣ್ಣ ಹೋಟೆಲ್​ಗಳು ಸೇರಿದಂತೆ ಫುಟ್​ಪಾತ್, ಕ್ಯಾಂಟೀನ್​ಗಳು 1,500 ಕ್ಕೂ ಹೆಚ್ಚಾಗಿದೆ. ಲಾಕ್​ಡೌನ್ ನಂತರ ನಗರದಲ್ಲಿ ಕೇವಲ 50 ಶೇ ರಷ್ಟು ಹೋಟೆಲ್​ಗಳು ಪುನಃ ಪ್ರಾರಂಭವಾಗಿದ್ದು, ಈ ಹೋಟೆಲ್​ಗಳಲ್ಲಿ ಕೇವಲ ಶೇ 25ರಷ್ಟು ವ್ಯವಹಾರ ಆಗುತ್ತಿದೆ.

ಲಾಕ್​ಡೌನ್ ನಂತರ ಅನ್​ಲಾಕ್​ನಲ್ಲಿ ಹೋಟೆಲ್​ಗಳು ಆರಂಭವಾದರೂ ವ್ಯಾಪಾರ ನಡೆಯುತ್ತಿಲ್ಲ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಇದರಿಂದ ಹೋಟೆಲ್​ಗಳ ಬಾಡಿಗೆ, ತೆರಿಗೆ ಇತರ ಖರ್ಚುಗಳನ್ನು ಸರಿದೂಗಿಸಲು ಕಷ್ಟವಾಗಿದ್ದು, ಇದರಿಂದ ಲಾಕ್​ಡೌನ್ ನಂತರ ಅನ್​ಲಾಕ್​ನಲ್ಲಿ ಹೋಟೆಲ್​ಗಳು ಆರಂಭವಾದರೂ ಅಷ್ಟೊಂದು ವ್ಯಾಪಾರ ನಡೆಯುತ್ತಿಲ್ಲ ಎಂದು ಹೋಟೆಲ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಲಾಕ್​ಡೌನ್ ನಂತರ ಹೋಟೆಲ್​ಗಳು ಚೇತರಿಕೆಗೊಂಡಿದ್ದೀಯೇ ಎಂಬ ಬಗ್ಗೆ ಹೋಟೆಲ್ ಮಾಲೀಕ ವಿವೇಕಾನಂದ ಲಾಕ್​ಡೌನ್ ನಂತರ ಹೋಟೆಲ್​ಗಳು ಚೇತರಿಸಿಕೊಳ್ಳುವುದು ಬಿಟ್ಟು ಮಲಗಿವೆ ಎದ್ದೇಳಲು ಆಗುತ್ತಿಲ್ಲ. ಹೋಟೆಲ್ ಪ್ರಾರಂಭ ಆಗಿದ್ದರೂ ಪ್ರವಾಸಿಗರು ಇಲ್ಲ ನಿವಾಸಿಗಳು ಇಲ್ಲ. ಹೋಟೆಲ್ ಉದ್ಯಮ‌ ಮೇಲೆ ಏಳಲು 2021 ರ ಮಾರ್ಚ್​ ವರೆಗೆ ಕಾಯಬೇಕು ಅದು ಗ್ಯಾರಂಟಿ ಇಲ್ಲ ಎಂದರು.

ಈಗ ಹೋಟೆಲ್ ಉದ್ಯಮ‌ ಚೇತರಿಸಿಕೊಳ್ಳಲು ಸರ್ಕಾರದ ಸೌಲಭ್ಯ ಬೇಕು. ಹೋಟೆಲ್ ತೆರೆದಿಲ್ಲ ಎಂದರೂ ಸರ್ಕಾರದಿಂದ ತೆರಿಗೆ ಹಾಕುತ್ತಿದ್ದಾರೆ. ಇದರಿಂದ ಹೋಟೆಲ್​ಗಳನ್ನು ನಂಬಿ ಬದುಕುವ ಜನರು ಕಷ್ಟದಲ್ಲಿ ಇದ್ದಾರೆ. ಲಾಕ್​​​ಡೌನ್ ನಂತರ ಕೋವಿಡ್ ಭಯ ಜನರಲ್ಲಿ ಹೋಗಿಲ್ಲ , ಇದರಿಂದ ಹೋಟೆಲ್ ಪ್ರಾರಂಭ ಮಾಡಿದರೂ ಜನ ಬರುತ್ತಿಲ್ಲ ಇನ್ನೂ ಸ್ವಲ್ಪ ಸಮಯ ಕಾಯಬೇಕು ಎಂದರು.

ABOUT THE AUTHOR

...view details