ಕರ್ನಾಟಕ

karnataka

ETV Bharat / state

ಶುಕವನಕ್ಕಿಲ್ಲ ಹಕ್ಕಿ ಜ್ವರದ ಭೀತಿ : ಗಣಪತಿ ಸಚ್ಚಿದಾನಂದ ಶ್ರೀ - coronavirus latest news

ಶುಕವನದಲ್ಲಿರುವ ಗಿಳಿಗಳಿಗೆ ಶ್ರೀಗಳು ಹಕ್ಕಿಜ್ವರ ಬಾರದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

The fear of bird fever is not to Shukavana in Mysore
ಶುಕವನಕ್ಕಿಲ್ಲ ಹಕ್ಕಿ ಜ್ವರದ ಭೀತಿ

By

Published : Mar 18, 2020, 5:59 PM IST

ಮೈಸೂರು: ವಿಶ್ವದಲ್ಲೇ ಪ್ರಸಿದ್ಧ ಗಿಳಿ ಪಾರ್ಕ್ ಹೊಂದಿರುವ ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇರುವ ಗಿಳಿ ಪಾರ್ಕ್​ಗೆ ಶುಕವನ ಎಂದು ಹೆಸರಿಡಲಾಗಿದ್ದು, ಇಲ್ಲಿ 4,000 ಕ್ಕೂ ಅತಿ ಹೆಚ್ಚು ವಿವಿಧ ಜಾತಿಯ ಗಿಳಿಗಳಿವೆ. ಆದರೆ ನಗರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು ಈ ಹಿನ್ನೆಲೆ ಜಿಲ್ಲಾಡಳಿತ ಪಕ್ಷಿಗಳ ಸರ್ವೇ ಕಾರ್ಯ ನಡೆಸಿ ಅವುಗಳನ್ನು ಕೊಲ್ಲಲು ಮುಂದಾಗಿದೆ.

ಶುಕವನಕ್ಕಿಲ್ಲ ಹಕ್ಕಿ ಜ್ವರದ ಭೀತಿ

ತದಕಾರಣ ಶುಕವನದಲ್ಲಿರುವ ಗಿಳಿಗಳಿಗೆ ಶ್ರೀಗಳು ಹಕ್ಕಿಜ್ವರ ಬಾರದಂತೆ ತಡೆಯಲು ಔಷಧವನ್ನ ಸಿಂಪಡಿಸಿ ಗಿಳಿಗಳಿಗೆ ನೀಡುವ ಆಹಾರದ ಜೊತೆ ಔಷಧಗಳನ್ನು ಬೆರೆಸಿ ನೀಡುತ್ತಿದ್ದಾರೆ. ಪ್ರತಿದಿನವೂ ಶುಕವನವನ್ನು ಸ್ವಚ್ಛಗೊಳಿಸುವ ಮೂಲಕ ಹಕ್ಕಿಜ್ವರದ ಭೀತಿಯನ್ನು ದೂರ ಮಾಡಲಾಗುತ್ತಿದೆ.

ಈಗಾಗಲೇ ಮೂರು ಬಾರಿ ಮೈಸೂರಿಗೆ ಹಕ್ಕಿಜ್ವರ ಬಂದಿದ್ದು, ಆದರೂ ಆಶ್ರಮದ ಗಿಳಿಗಳಿಗೆ ಏನು ಆಗಿಲ್ಲ. ಇದಕ್ಕೆ ಕಾರಣ ನಾವು ಆಶ್ರಮದ ಗಿಳಿಗಳ ಸುರಕ್ಷತೆಗೆ ತೆಗೆದುಕೊಂಡ ಕ್ರಮಗಳು ಎಂದು ಗಣಪತಿ ಸಚ್ಚಿದಾನಂದ ಶ್ರೀಗಳು ಈಟಿವಿ ಭಾರತಕ್ಕೆ ತಿಳಿಸಿದರು.

ABOUT THE AUTHOR

...view details