ಕರ್ನಾಟಕ

karnataka

ETV Bharat / state

ದಸರಾ ಹಿನ್ನೆಲೆ: ನಾಳೆ ಮೈಸೂರಿಗೆ ಭೇಟಿ ನೀಡಲಿರುವ ತಜ್ಞರ ತಂಡ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈ ಬಾರಿ ಮೈಸೂರು ದಸರಾ ಹೇಗಿರಬೇಕು ಎಂಬುದರ ಬಗ್ಗೆ ವರದಿ ತಯಾರಿಸಲಾಗುತ್ತಿದೆ. ಈ ಹಿನ್ನೆಲೆ ನಾಳೆ ತಜ್ಞರ ತಂಡವೊಂದು ನಗರಕ್ಕೆ ಆಗಮಿಸಲಿದೆ. ಈ ಬಗ್ಗೆ ವರದಿ ತಯಾರಿಸಿ ಎರಡು ದಿನಲ್ಲಿ ಸರ್ಕಾರಕ್ಕೆ ಒಪ್ಪಿಸಲಿದೆ.

The experts team will visit Mysore tomorrow
ಮೈಸೂರು ಅರವನೆ (ಸಂಗ್ರಹ ಚಿತ್ರ)

By

Published : Oct 8, 2020, 10:09 PM IST

ಮೈಸೂರು : ನಾಡ ಹಬ್ಬ ದಸರಾ ಸರಳವಾಗಿರಬೇಕೋ ಅಥವಾ ಸಂಪ್ರದಾಯಿಕವಾಗಿರಬೇಕೋ ಎಂಬುವುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಲು ನಾಳೆ (ಶುಕ್ರವಾರ) ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಮೈಸೂರಿಗೆ ಆಗಮಿಸಲಿದೆ.

ರಾಜ್ಯ ಮಟ್ಟದ ತಾಂತ್ರಿಕ‌ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ ನೇತೃತ್ವದ ತಂಡ ಮೈಸೂರಿಗೆ ಆಗಮಿಸಿ,‌ ದಸರಾ ಪೂರ್ವಭಾವಿ ಸಿದ್ಧತೆ ಹಾಗೂ ಕೋವಿಡ್ -19 ಹರಡದಂತೆ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಲಿದೆ.

ತಾಂತ್ರಿಕ ಸಮಿತಿ ತಂಡಕ್ಕೆ ಮಾಹಿತಿ ನೀಡಲು ಜಿಲ್ಲಾಡಳಿತದಿಂದ ಉಪವಿಭಾಗಾಧಿಕಾರಿ,‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ, ಅರಮನೆ ಭದ್ರತಾ ಪಡೆಯ ಸಹಾಯಕ ಪೊಲೀಸ್ ಆಯುಕ್ತರನ್ನು ನೇಮಕ ಮಾಡಲಾಗಿದೆ.

ಜಿಲ್ಲಾಡಳಿತದಿಂದ ನೇಮಕಗೊಂಡಿರುವ ಅಧಿಕಾರಿಗಳು, ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿಗೆ ಸೂಕ್ತ ಮಾಹಿತಿ ನೀಡಲಿದ್ದಾರೆ. ಎರಡು ದಿನದೊಳಗೆ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ನೀಡಲಿದೆ. ವರದಿ ಆಧರಿಸಿ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗುತ್ತಿದೆ.

ABOUT THE AUTHOR

...view details