ಕರ್ನಾಟಕ

karnataka

ETV Bharat / state

ಪರಿಹಾರ ಕೇಂದ್ರದಲ್ಲಿದ್ದ ವೃದ್ಧೆ ಮನೆ ನೋಡಲು ಹೋದಾಗ ನಡೀತು ದುರಂತ - ಪರಿಹಾರ ಕೇಂದ್ರ

ಜಲಾಶಯದ ನೀರು ಹಾಗೂ ಮಳೆ ತಗ್ಗಿ ಬಿಸಿಲಿನ ವಾತಾವರಣ ಬಂದ ಹಿನ್ನೆಲೆಯಲ್ಲಿ ತನ್ನ ಮನೆಯನ್ನು ನೋಡಲು ಹೋಗಿದ್ದ ವೃದ್ಧೆ ವಿದ್ಯುತ್​​ ತಂತಿಗೆ ಬಲಿಯಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವೃದ್ಧೆ ಸಾವು

By

Published : Aug 16, 2019, 10:58 AM IST

ಮೈಸೂರು: ಪರಿಹಾರ ಕೇಂದ್ರದಲ್ಲಿದ್ದ ವೃದ್ಧೆವೋರ್ವಳು ತನ್ನ ಮನೆ ನೋಡಲು ಹೋಗಿ ಕರೆಂಟ್ ಶಾಕ್ ನಿಂದ ಮೃತಪಟ್ಟಿರುವ ಘಟನೆ ಹೆಚ್​ ಡಿ ಕೋಟೆ ತಾಲೂಕಲ್ಲಿ ನಡೆದಿದೆ.

ಬಿದರಳ್ಳಿ ಗ್ರಾಮದ ನಿವಾಸಿ ರಾಜಮ್ಮ(60) ವಿದ್ಯುತ್​ ಸ್ಪರ್ಶದಿಂದ ಮೃತಪಟ್ಟಿರುವ ವೃದ್ಧೆ. ಕಬಿನಿ ಜಲಾಶಯದ ಹೊರ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಬಿದರಹಳ್ಳಿ ವೃತ್ತದ ಬಳಿ ಇರುವ ಮನೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದರಿಂದ ಪರಿಹಾರ ಕೇಂದ್ರಕ್ಕೆ ಕುಟುಂಬವನ್ನು ಸ್ಥಳಾಂತರ ಮಾಡಲಾಗಿತ್ತು.

ವೃದ್ಧೆ ಸಾವು

ಜಲಾಶಯ ನೀರು ಹಾಗೂ ಮಳೆ ತಗ್ಗಿ ಬಿಸಿಲಿನ ವಾತಾವರಣ ಬಂದ ಹಿನ್ನೆಲೆಯಲ್ಲಿ ತನ್ನ ಮನೆಯನ್ನು ನೋಡಲು ವೃದ್ಧೆ ತೆರಳಿದ್ದಳು. ಈ ಸಂದರ್ಭದಲ್ಲಿ ಮನೆ ಮುಂದೆ ಹೋಗುತ್ತಿದ್ದಂತೆ ನೆಲದಲ್ಲಿ ವಿದ್ಯುತ್ ಸ್ಪರ್ಶಸಿ ಮೃತಪಟ್ಟಿದ್ದಾರೆ. ತಾಯಿ ಮೃತಪಟ್ಟಿರುವ ವಿಷಯ ತಿಳಿದ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು.

ABOUT THE AUTHOR

...view details