ಮೈಸೂರು :ಶ್ರೀರಂಗಪಟ್ಟಣದ ಅನೂಪ್ ಜೋಯ್ ಎಂಬುವವರ ಕೊಲೆಯ ಕೇಸ್‌ನಲ್ಲಿಜಯಂತ್ ಎಂಬಾತನೇ ಪ್ರಮುಖ ಆರೋಪಿಯಾಗಿದ್ದಾನೆ.ಈತಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಆಗ ಆತನ ಕಾಲಿಗೆ ಗುಂಡೇಟು ತಗಲಿದೆ. ಈತನ ವರ್ತನೆ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದಿವೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದರು.
ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ಬಸ್ ಡ್ರೈವರ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಮೂವರ ವಿರುದ್ಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇವರನ್ನ ಬೆನ್ನೆತ್ತಿದ ಪೊಲೀಸರು ಚಿತ್ರದುರ್ಗದ ಮೊಣಕಾಲ್ಮೂರಿನಲ್ಲಿ ಈ ಮೂವರನ್ನು ಬಂಧಿಸಿ, ಮೈಸೂರಿಗೆ ಕರೆದುಕೊಂಡು ಬರುವಾಗ ಮೂತ್ರವಿಸರ್ಜನೆಗೆಂದು ಇಳಿಯುವ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಆರೋಪಿ ಜಯಂತ್ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಪಿಎಸ್ಐ ಆರೋಪಿಯ ಕಾಲಿಗೆ ಫೈರ್ ಮಾಡದ್ದಾರೆ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ರಿಷ್ಯಂತ್ ಇದನ್ನೂ ಓದಿ..ಬೈಕ್ಗೆ ದಾರಿ ಬಿಡದಕ್ಕೆ ಆಕ್ರೋಶ: KSRTC ಬಸ್ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ!
ಇನ್ನು, ಬಂಧಿತರನ್ನು ವಿಚಾರಣೆಗೊಳಪಡಿಸಿದಾಗ ಜಯಂತ್ ಶ್ರೀರಂಗಪಟ್ಟಣದ ಅನೂಪ್ ಜೋಯ್ ಎಂಬುವರ ಕೊಲೆಯ ಕೇಸ್ನಲ್ಲಿ ಪ್ರಮುಖ ಆರೋಪಿಯಾಗಿರುವುದು ತಿಳಿದು ಬಂದಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದರು.