ಮೈಸೂರು:ಚಾಮುಂಡಿ ಬೆಟ್ಟದ ದೇವಿಕೆರೆಯಲ್ಲಿ ಸಂಭ್ರಮದಿಂದ ಚಾಮುಂಡೇಶ್ವರಿಯ ತೆಪ್ಪೋತ್ಸವ ಜರುಗಿತು. ಈ ಮೂಲಕ ನವರಾತ್ರಿಯ ಕೊನೆಯ ಕಾರ್ಯಕ್ರಮ ಮುಕ್ತಾಯವಾಯಿತು.
ಚಾಮುಂಡಿ ಬೆಟ್ಟದ ದೇವಿಕೆರೆಯಲ್ಲಿ ತೆಪ್ಪೋತ್ಸವ: ಯಶಸ್ವಿಯಾಗಿ ಮುಗಿದ ದಸರಾ - ದೇವಿಕೆರೆಯನ್ನು ಪ್ರದಕ್ಷಿಣೆ
ಚಾಮುಂಡೇಶ್ವರಿಯ ತೆಪ್ಪೋತ್ಸವವು ಚಾಮುಂಡಿ ಬೆಟ್ಟದ ದೇವಿಕೆರೆಯಲ್ಲಿ ಸಂಭ್ರಮ ಸಡಗರದಿಂದ ನಡೆಯಿತು. ಇದಕ್ಕೆ ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ಚಾಮುಂಡಿ ಬೆಟ್ಟದ ಪ್ರಸಿದ್ಧ ದೇವಿಕೆರೆಯಲ್ಲಿ ಚಾಮುಂಡೇಶ್ವರಿಯ ತೆಪ್ಪೋತ್ಸವಕ್ಕೆ ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಳೆಯಿಂದ ತೆಪ್ಪೋತ್ಸವತಡವಾಗಿ ಅರಂಭವಾಯಿತು. ಕೆರೆಯ ಪಕ್ಕದಲ್ಲೇ ನಿಂತು ತೆಪ್ಪೋತ್ಸವಕ್ಕೆ ಚಾಲನೆ ನೀಡಿದ್ದರು ರಾಜವಂಶಸ್ಥರು. ಚಾಮುಂಡೇಶ್ವರಿಯ ಉತ್ಸವ ಮೂರ್ತಿ ತೆಪ್ಪದಲ್ಲಿ ದೇವಿಕೆರೆಯನ್ನು ಪ್ರದಕ್ಷಿಣೆ ಹಾಕಿದ ನಂತರ ಸಕಲ ಪೊಲೀಸ್ ಗೌರವದೊಂದಿಗೆ ಪೊಲೀಸ್ ಬ್ಯಾಂಡ್ನ ಹಿಮ್ಮೇಳನದೊಂದಿಗೆ ತೆಪ್ಪೋತ್ಸವ ಮುಕ್ತಾಯವಾಯಿತು. ಈ ಬಾರಿಯ ನವರಾತ್ರಿ ಮಹೋತ್ಸವ ಕೊನೆಯ ಕಾರ್ಯಕ್ರಮದೊಂದಿಗೆ ದಸರಾ ಯಶಸ್ವಿಯಾಗಿ ಮುಗಿಯಿತು.