ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ 9 ಮಂದಿಗೆ ಕೊರೊನಾ ದೃಢ: ಮುಂಬೈ ಲಿಂಕ್​ಗೆ ಬೆಚ್ಚಿದ ಜನ! - ಮೈಸೂರಿನಲ್ಲಿ ಕೊರೊನಾ

ಮಹಾರಾಷ್ಟ್ರದ ಕೊರೊನಾ ನಂಜು ಉತ್ತರ ಕರ್ನಾಟಕ ಭಾಗಕ್ಕೆ ಮಾತ್ರವಲ್ಲದೆ, ಸಾಂಸ್ಕೃತಿಕ ನಗರಿ ಮೈಸೂರಿಗೂ ತಗುಲಿದ್ದು, ಜಿಲ್ಲೆಯಲ್ಲಿ 9 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ.

Mysore
ಮೈಸೂರು

By

Published : Jun 12, 2020, 10:19 PM IST

Updated : Jun 12, 2020, 11:26 PM IST

ಮೈಸೂರು: ಜುಬಿಲಿಯಂಟ್​ ಕಾರ್ಖಾನೆಯ​ ಕೊರೊನಾ ನಂಟಿನ ಬಳಿಕ ಮುಂಬೈ ನಂಜು ಸಾಂಸ್ಕೃತಿಕ ನಗರಿಯನ್ನು ಬೆಚ್ಚಿ ಬೀಳಿಸುತ್ತಿದ್ದು, ಎರಡು ತಿಂಗಳ ನಂತರ ಜಿಲ್ಲೆಯಲ್ಲಿ 9 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಪೈಕಿ 7 ಮಂದಿ ಮುಂಬೈನಿಂದ ಆಗಮಿಸಿದ್ದು, ತಮಿಳುನಾಡು ಮೂಲದ ಸಂಪರ್ಕಿತನಿಂದ ಮತ್ತೋರ್ವ ವ್ಯಕ್ತಿಗೆ ಸೋಂಕು ತಗುಲಿದರೆ, ಕೆ.ಆರ್. ಪೇಟೆಯಿಂದ ಕೆ.ಆರ್. ನಗರಕ್ಕೆ ಆಗಮಿಸಿದ ಮತ್ತೋರ್ವ ಗರ್ಭೀಣಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 115 ಪ್ರಕರಣಗಳ ಪೈಕಿ 19 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Last Updated : Jun 12, 2020, 11:26 PM IST

ABOUT THE AUTHOR

...view details