ಮೈಸೂರು: ನಮ್ಮ ನಾಯ್ಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಈ ಬಾರಿ ದಸರಾ ಉದ್ಘಾಟನೆಯ ಕಾರ್ಯಕ್ರಮದಲ್ಲಿ ನಾವು ಸಹಕರಿಸುವುದಿಲ್ಲ ಎಂದು ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಸಮೂಹ ದೇವಸ್ಥಾನಗಳ ಸಂಘ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಪರಿಷ್ಕೃತಗೊಳ್ಳದ ಸಂಬಳ... ದಸರಾ ಉದ್ಘಾಟನೆಗೆ ಸಹಕರಿಸದಿರಲು ಚಾಮುಂಡಿ ಬೆಟ್ಟದ ದೇಗುಲ ಸಿಬ್ಬಂದಿ ನಿರ್ಧಾರ - Dasara inaugural event
ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಸಮೂಹ ದೇವಸ್ಥಾನಗಳ ಸಂಘಗಳು ಈ ಬಾರಿ ತಮ್ಮ ನಾಯ್ಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ದಸರಾ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಸಹಕರಿಸುವುದಿಲ್ಲ ಎಂದು ಎಚ್ಚರಿಸಿವೆ.
ಶ್ರೀ ಚಾಮುಂಡೇಶ್ವರಿ ಹಾಗೂ ಸಮೂಹ ದೇವಸ್ಥಾನಗಳ ನೌಕರರ ಸಂಘವು ಕಳೆದ ಬುಧವಾರ ತಮ್ಮ ಸಂಘದಲ್ಲಿ ವಿಶೇಷ ಸಭೆ ಕರೆದು 6ನೇ ಸರ್ಕಾರಿ ವೇತನದ ಅನ್ವಯ ಸಂಬಳ ನೀಡಬೇಕೆಂದು ಫೆಬ್ರವರಿಯಲ್ಲಿ ಉಪವಾಸ ಸತ್ಯಗ್ರಹ ನಡೆಸಿದ್ದರು. ಆಗ ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ ಎಂದು ಆಶ್ವಾಸನೆ ನೀಡಿದ ಹಿನ್ನೆಲೆ ಉಪವಾಸ ಸತ್ಯಾಗ್ರಹವನ್ನು ಕೈಬಿಡಲಾಯಿತು. ಆದರೆ, ಇಲ್ಲಿಯವರೆಗೆ ನಮ್ಮ ನ್ಯಾಯಯುತ ಹೇಳಿಕೆಗಳನ್ನು ಸರ್ಕಾರ ಈಡೇರಿಸಿಲ್ಲ.
ಇನ್ನೂ, ಮುಂದಿನ ತಿಂಗಳು ದಸರಾ ಉದ್ಘಾಟನೆಗೆ ಮೊದಲು ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ತಿಂಗಳು 29 ರಂದು ನಡೆಯಲಿರುವ ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತೇವೆ ಮತ್ತು ಯಾವುದೇ ಸಹಕಾರ ನೀಡುವುದಿಲ್ಲ ಎಂದು ದೇವಸ್ಥಾನದ ನೌಕರರ ಸಂಘದ ಪದಾಧಿಕಾರಿಗಳು ಮಾಧ್ಯಮ ಪ್ರಕಟಣೆ ನೀಡಿದ್ದಾರೆ.