ಮೈಸೂರು:ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ತೃತೀಯ ರಂಗ ರಚನೆ ಬಗ್ಗೆ ನನ್ನ ಜೊತೆ ಟೆಲಿಫೋನ್ನಲ್ಲಿ ಮಾತನಾಡಿ ಸಭೆಯಲ್ಲಿ ಭಾಗವಹಿಸುವಂತೆ ಕೇಳಿಕೊಂಡಿದ್ದಾರೆ. ನಾನು ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಮೈಸೂರಿನಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ.
ಹೆಚ್ಡಿಕೆಗೆ ಕರೆ ಮಾಡಿದ್ರಂತೆ ತೆಲಂಗಾಣ ಸಿಎಂ: ಮರು ಜೀವ ಪಡೆಯಲಿದೆಯಾ ತೃತೀಯ ರಂಗ? - Former minister Kumaraswamy press meet in Mysore
ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ತೃತೀಯ ರಂಗ ರಚನೆ ಬಗ್ಗೆ ನನ್ನ ಜೊತೆ ಟೆಲಿಫೋನ್ನಲ್ಲಿ ಮಾತನಾಡಿದ್ದಾರೆ. ಈ ಕುರಿತು ಸಭೆಯಲ್ಲಿ ಭಾಗವಹಿಸುವಂತೆ ನನಗೆ ದೂರವಾಣಿ ಕರೆ ಮಾಡಿದ್ದಾರೆ. ನಾನು ಭಾಗವಹಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಕುಮಾರಸ್ವಾಮಿಗೆ ತೆಲಂಗಾಣ ಸಿಎಂ ಫೋನ್ ಮಾಡಿದ್ದೇಕೆ?
ಇಂದು ಖಾಸಗಿ ಕಲ್ಯಾಣ ಮಂಟಪದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ತೆಲಂಗಾಣ ಸಿಎಂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೊರತು ಪಡಿಸಿ ತೃತೀಯ ರಂಗ ರಚನೆ ಬಗ್ಗೆ ಸಭೆ ನಡೆಸುತ್ತಿದ್ದಾರೆ. ಆ ಸಭೆಯಲ್ಲಿ ಭಾಗವಹಿಸುವಂತೆ ನನಗೆ ದೂರವಾಣಿ ಕರೆ ಮಾಡಿದ್ದಾರೆ. ನಾನು ಭಾಗವಹಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.