ಕರ್ನಾಟಕ

karnataka

ETV Bharat / state

ಬೇಳೆಕಾಳು, ತರಕಾರಿಗಳಿಂದಲೇ ವೀಗನ್​ ಮಾಂಸ, ಚೀಸ್​ ತಯಾರಿಕೆ: ವಿಜ್ಞಾನಿ ಹೇಳಿದ್ದೇನು? - etv bharat kannada

ಸಸ್ಯಗಳು, ಬೇಳೆಕಾಳುಗಳು ಹಾಗೂ ತರಕಾರಿಗಳಿಂದ ಅಭಿವೃದ್ಧಿಪಡಿಸಿರುವ ವೀಗನ್​ ಪ್ರಾಡಕ್ಟ್ ತಂತ್ರಜ್ಞಾನವನ್ನು 9ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

Etv Bharattechnology-making-vegan-meat-and-cheese-from-pulses-and-vegetables-exhibited-in-mysuru
ಬೇಳೆಕಾಳು, ತರಕಾರಿಗಳಿಂದಲೇ ವೀಗನ್​ ಮಾಂಸ, ಚೀಸ್​ ತಯಾರಿಕೆ: ವಿಜ್ಞಾನಿ ಹೇಳಿದ್ದೇನು?

By ETV Bharat Karnataka Team

Published : Dec 9, 2023, 11:04 PM IST

ವಿಜ್ಞಾನಿ ವಸಂತರಾಘವನ್ ಪ್ರತಿಕ್ರಿಯೆ

ಮೈಸೂರು: ತಿರುವನಂತಪುರಂನ ಸಿಎಸ್​ಐಆರ್ - ಎನ್​ಐಐಎಸ್​ಟಿ ಪ್ರಾಣಿಯ ಮಾಂಸಕ್ಕೆ ಪರ್ಯಾಯವಾಗಿ ಸಸ್ಯಗಳು, ಬೇಳೆಕಾಳುಗಳು ಹಾಗೂ ತರಕಾರಿಗಳಿಂದ ಅಭಿವೃದ್ಧಿಪಡಿಸಿರುವ ವೀಗನ್​ ಪ್ರಾಡಕ್ಟ್ ತಂತ್ರಜ್ಞಾನವನ್ನು 9ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ಈ ಕುರಿತು ಈಟಿವಿ ಭಾರತದ ಜೊತೆಗೆ ಮಾತನಾಡಿದ ತಿರುವನಂತಪುರಂ ಸಿಎಸ್​ಐಆರ್ - ಎನ್​ಐಐಎಸ್​ ವಿಜ್ಞಾನಿ ವಸಂತರಾಘವನ್, "ಇತ್ತೀಚಿನ ದಿನಗಳಲ್ಲಿ ಜನರು ಪ್ರಾಣಿಗಳಿಂದ ಉತ್ಪಾದಿಸಿದ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ದೇಶದಲ್ಲಿ ಸುಸ್ಥಿರವಾಗಿ ಮಾಂಸ, ಹಾಲು ಸೇರಿದಂತೆ ಇತರೆ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ನಮ್ಮ ದೇಶಕ್ಕೆ ಹೋಲಿಸಿದರೆ ಬೇರೆ ಬೇರೆ ದೇಶಗಳಲ್ಲಿ ಇಂಡಸ್ಟ್ರಿಯಲ್ ಫಾರ್ಮಿಂಗ್ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಿಗಳನ್ನು ಬೆಳಸಲಾಗುತ್ತಿದೆ. ಈ ರೀತಿ ಅವರು ಮಾಂಸವನ್ನು ಪಡೆಯುತ್ತಿರುವುದು ಸುಸ್ಥಿರವಲ್ಲ. ಏಕೆಂದರೆ ಇದರಲ್ಲಿ ನೀರು, ಭೂಮಿ ಸೇರಿದಂತೆ ಇತರೆ ಸಂಪನ್ಮೂಲಗಳು ಹೆಚ್ಚು ಬಳಸಿಕೊಳ್ಳಲಾಗುತ್ತದೆ" ಎಂದರು.

ವೀಗನ್​ ಪ್ರಾಡಕ್ಟ್​ಗಳು ಪರಿಸರ, ಜನರ ಆರೋಗ್ಯಕ್ಕೆ ಒಳ್ಳೆಯದು:"ಈ ಕಾರಣದಿಂದ ನಾವು ಪರ್ಯಾಯವಾಗಿ ವೀಗನ್​ ಪ್ರಾಡಕ್ಟ್​ಗಳನ್ನು ಉತ್ಪಾದನೆ ಮಾಡುತ್ತಿದ್ದೇವೆ. ಇಂಡಸ್ಟ್ರಿಯಲ್ ಫಾರ್ಮಿಂಗ್ ಪರಿಸರಕ್ಕೆ ಮಾರಕವಾಗಿದೆ. ಪ್ರಾಣಿಯ ಒಂದು ಮಾಂಸದ ಉತ್ಪಾದನೆಗೆ 10 ಕೆ.ಜಿ ಧಾನ್ಯಗಳು ಬೇಕಾಗುತ್ತದೆ. ಈ ಮೂಲಕ ಹತ್ತು ಮಂದಿ ತಿನ್ನುವ ಆಹಾರವನ್ನು ಮಾಂಸಾಹಾರಿ ಒಬ್ಬ ವ್ಯಕ್ತಿ ತಿನ್ನುತ್ತಾನೆ. ಹೀಗಾಗಿ ಮಾಂಸಕ್ಕೆ ಪರ್ಯಾಯವಾಗಿ ಬೇಳೆಕಾಳುಗಳು, ತರಕಾರಿಗಳಿಂದ ವೀಗನ್​ ಪ್ರಾಡಕ್ಟ್​ಗಳನ್ನು ಉತ್ಪಾದಿಸಲಾಗುತ್ತಿದೆ. ಇದು ಪರಿಸರ, ಜನರ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇವು ಕೊಲೆಸ್ಟ್ರಾಲ್, ಪ್ರಾಣಿಗಳಿಗೆ ನೀಡುವ ಆ್ಯಂಟಿ ಬಯೋಟಿಕ್ಸ್​ ​ನಿಂದ ಮುಕ್ತವಾಗಿವೆ" ಎಂದು ತಿಳಿಸಿದರು.

"ತಿರುವನಂತಪುರಂ ಸಿಎಸ್​ಐಆರ್ ನಲ್ಲಿ ಪ್ಲಾಂಟ್​ ಬೇಸ್ಡ್​​ ಉತ್ಪನ್ನಗಳಿಂದ ವೀಗನ್​ ಮಾಂಸ, ಚೀಸ್ ಮತ್ತು ಹಾಲನ್ನು ಉತ್ಪಾದಿಸಲಾಗುತ್ತಿದೆ.​ ವೀಗನ್​ ಪ್ರಾಡಕ್ಟ್ ತಯಾರಿಗೆ ಬಳಸುವ ಯಂತ್ರಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಇವುಗಳ ಬೆಲೆ ಕನಿಷ್ಠ 2 ಕೋಟಿ ಯಿಂದ 10 ಕೋಟಿಯಷ್ಟಿದೆ. ಇದರಿಂದ ಸ್ಟಾರ್ಟ್ ಅಪ್​ಗಳು ಬಂಡವಾಳ ಹೂಡಿಕೆ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ನಾವು ಸ್ಥಳೀಯವಾಗಿ ಕೂಲಿಂಗ್ ಡೈ ಅನ್ನು ಅಭಿವೃದ್ಧಿಪಡಿಸಿದ್ದೇವೆ. ಇದರಿಂದ ನಾವು ಕಡಿಮೆ ವೆಚ್ಚದಲ್ಲಿ ವೀಗನ್​ ಮಾಂಸ ಉತ್ಪಾದಿಸಬಹುದು. ಈ ಉಪಕರಣಗಳು ಕೇವಲ 50 ಲಕ್ಷ ಮಾತ್ರ. ಆದ್ದರಿಂದ ನಾವು ಉತ್ಪಾದಿಸಿರುವ ವೀಗನ್​ ಮಾಂಸ ಪ್ರಾಣಿಗಳ ಮಾಂಸಕ್ಕೆ ಹೋಲಿಸಿದರೆ ತುಂಬಾ ಒಳ್ಳೆಯದು" ಎಂದು ವಿವರಿಸಿದರು.

"ನಾವು ತಯಾರಿಸಿರುವ ವೀಗನ್​ ಚೀಸ್​, ನೈಜ ಚೀಸ್​ನಂತೆಯೇ ಇದೆ. ಹಲವು ಕಂಪನಿಗಳು ಈ ತಂತ್ರಜ್ಞಾನಕ್ಕಾಗಿ ನಮ್ಮನ್ನು ಸಂಪರ್ಕಿಸುತ್ತಿವೆ, ನಾವು ಅವರಿಗೆ ಸಹಕಾರ ಕೊಡುತ್ತಿದ್ದೇವೆ. ವೀಗನ್​ ಉತ್ಪನ್ನಗಳು ಇನ್ನು ಮಾರುಕಟ್ಟೆಗೆ ಬಿಡಲಾಗಿಲ್ಲ, ಕೆಲವನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಇನ್ನೂ ಕೆಲವು ಅಭಿವೃದ್ಧಿ ಹಂತದಲ್ಲಿವೆ ಪೂರ್ಣ ಪ್ರಮಾಣದ ಅಭಿವೃದ್ಧಿಯ ನಂತರ ನಾವು ಈ ತಂತ್ರಜ್ಞಾನವನ್ನು ಕಂಪನಿಗಳಿಗೆ ಕೊಡುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ:ಕೃಷಿ ತ್ಯಾಜ್ಯದಿಂದಲೇ ​ಜಾಕೆಟ್, ಬ್ಯಾಗ್​, ಶೂ ತಯಾರಿಕೆ

ABOUT THE AUTHOR

...view details