ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರವು ವಿದ್ಯಾರ್ಥಿಗಳಿಗೆ ನೀಡಿರುವ ಆಹಾರಧಾನ್ಯವನ್ನು ಎತ್ತಿನಗಾಡಿ ಮೂಲಕ ವಿತರಣೆ ಮಾಡಿ, ತುಂಬಲ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರಾಯಪ್ಪ ಗೌಂಡಿ ಮಾದರಿಯಾಗಿದ್ದಾರೆ.
ಎತ್ತಿನಗಾಡಿ ಮೂಲಕ ಶಾಲಾ ಮಕ್ಕಳ ಮನೆ ಬಾಗಿಲಿಗೆ ರೇಷನ್ ವಿತರಿಸಿದ ಶಿಕ್ಷಕ - ಎತ್ತಿನ ಗಾಡಿ ಮೂಲಕ ಶಾಲಾ ಮಕ್ಕಳ ಮನೆ ಬಾಗಿಲಿಗೆ ರೇಷನ್ ವಿತರಿಸಿದ ಶಿಕ್ಷಕ
ನಿತ್ಯವೂ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿಭಿನ್ನ ರೀತಿಯಲ್ಲಿ ಕೊರೊನಾ ಜಾಗೃತಿ ಮೂಡಿಸುವ ರಾಯಪ್ಪ ಗೌಂಡಿ, ಲಾಕ್ಡೌನ್ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮನೆ ಮನೆಗೆ ತೆರಳಿ ಪ್ರತಿಯೊಂದು ಮಕ್ಕಳ ಓದಿನ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.
ಶಾಲಾ ಮಕ್ಕಳ ಮನೆ ಬಾಗಿಲಿಗೆ ರೇಷನ್ ವಿತರಿಸಿದ ಶಿಕ್ಷಕ
ಶಾಲೆಯ ಪ್ರತಿಯೊಂದು ವಿದ್ಯಾರ್ಥಿ ಮನೆಗೆ ತೆರಳಿ ಪಠ್ಯ ಬೋಧಿಸುತ್ತಿದ್ದಾರೆ. ಮುಖ್ಯ ಶಿಕ್ಷಕ ರಾಯಪ್ಪ ಗೌಂಡಿ ಎಂದರೆ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಅಚ್ಚುಮೆಚ್ಚು ಆಗಿದ್ದಾರೆ. ಸರ್ಕಾರಿ ಸಂಬಳ ಪಡೆದು ಕೇವಲ ಶಾಲೆಗಷ್ಟೇ ಸೀಮಿತವಾಗುವ ಸಹಸ್ರಾರು ಶಿಕ್ಷಕರ ನಡುವೆ ರಾಯಪ್ಪ ಗೌಂಡಿ ಮಾದರಿಯಾಗಿದ್ದಾರೆ.
Last Updated : May 26, 2021, 12:23 PM IST