ಕರ್ನಾಟಕ

karnataka

ETV Bharat / state

ಮೈಸೂರು: ಖಾಸಗಿ ಶಾಲೆ ಶಿಕ್ಷಕನಿಂದ ವಿದ್ಯಾರ್ಥಿಗೆ ಥಳಿತ, ಕೈಗೆ ಹೊಲಿಗೆ - ETv Bharat karnataka

ಶಾಲೆಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಬಲವಾಗಿ ಹೊಡೆದಿರುವ ಆರೋಪ ಎದುರಿಸುತ್ತಿದ್ದು, ಬಾಲಕನ ಬಲಗೈಗೆ ಆರು ಸ್ಟಿಚ್ ಹಾಕಲಾಗಿದೆ ಎಂದು ತಿಳಿದುಬಂದಿದೆ.

teacher who beat a student for a trivial reason
ಕ್ಷುಲಕ ಕಾರಣ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ

By

Published : Nov 27, 2022, 10:45 AM IST

ಮೈಸೂರು:ಇಲ್ಲಿನ ಖಾಸಗಿ ಶಾಲೆಯ ಶಿಕ್ಷಕರೊಬ್ಬರುಸ್ಟೀಲ್ ಸ್ಕೇಲ್‌ನಿಂದ ವಿದ್ಯಾರ್ಥಿಗೆ ಬಲವಾಗಿ ಹೊಡೆದು ಕೈ ಸೀಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೆಚ್.ಡಿ.ಕೋಟೆ ಪಟ್ಟಣದ ಶಾಂತಿಪುರದ ಶಾಲೆಯೊಂದರಲ್ಲಿ ಘಟನೆ ನಡೆದಿದೆ.

ಬಿಡುವಿನ ವೇಳೆ ಶಾಲಾ ಕೊಠಡಿಯಲ್ಲಿ ಸೀಮೆಸುಣ್ಣ ಮುರಿದು 8ನೇ ತರಗತಿ ವಿದ್ಯಾರ್ಥಿ ಆಟವಾಡುತ್ತಿದ್ದನಂತೆ. ಇದರಿಂದ ಕೋಪಗೊಂಡ ಶಿಕ್ಷಕ ವಿದ್ಯಾರ್ಥಿಗೆ ಥಳಿಸಿದ್ದಾರೆ. ಪರಿಣಾಮ ಅಂಗೈ ಸೀಳಿ ಗಾಯವಾಗಿದೆ. ಭಯಗೊಂಡ ಶಿಕ್ಷಕ ಪೋಷಕರಿಗೆ ಕರೆ ಮಾಡಿದ್ದು, ಕಟ್ಟರ್‌ನಿಂದ ಕೈಗೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಪೋಷಕರು ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಕೈಗೆ 6 ಹೊಲಿಗೆ ಹಾಕಿಸಿ‌ದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ರೌಡಿಯಂತೆ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಶಿಕ್ಷಕ! ವಿಡಿಯೋ...

ABOUT THE AUTHOR

...view details