ಬೆಂಗಳೂರು: ಮೈಸೂರು ಮೇಯರ್ ಚುನಾವಣೆಯಲ್ಲಿ ಮೈತ್ರಿ ಪಾಲಿಟಿಕ್ಸ್ ಮಾಡಿದ ಕುರಿತು ಶಿಸ್ತು ಸಮಿತಿ ನೋಟಿಸ್ಗೆ ಮಾಜಿ ಸಚಿವ ತನ್ವೀರ ಸೇಠ ಉತ್ತರ ನೀಡಿದ್ದಾರೆ ಎಂಬ ಮಾಹಿತಿ ಇದೆ.
ಪಕ್ಷ ಹಾಗೂ ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡಿಲ್ಲ; ತನ್ವೀರ ಸೇಠ - Tanveer Seth Description
ಸಿಎಲ್ಪಿ ನಾಯಕರು ಮೈಸೂರಿನಲ್ಲಿ ಮೇಯರ್ ಸ್ಥಾನಕ್ಕೆ ಸೂಚಿಸಿದ್ದರು. ಅಂತಹ ಸಂದರ್ಭ ಒದಗಿ ಬರಲಿಲ್ಲ. ಹಾಗಾಗಿ ಉಪಮೇಯರ್ ಸ್ಥಾನಕ್ಕೆ ಒಪ್ಪಿಕೊಂಡೆವು. ಇಲ್ಲವಾಗಿದ್ದರೆ ಬಿಜೆಪಿ ಜೊತೆ ಹೋಗ್ತಿದ್ರು. ಅದನ್ನ ತಪ್ಪಿಸಿ ಜಾತ್ಯಾತೀತ ತತ್ವ ಉಳಿಸಿದ್ದೇನೆ ಎಂದು ತನ್ವೀರ ಸೇಠ ವಿವರಿಸಿದ್ದಾರೆ.
ಪಕ್ಷದ ಆದೇಶದಂತೆ ನಡೆದುಕೊಂಡಿದ್ದೇನೆ ಎಂದು ತನ್ವೀರ ಸೇಠ ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಹಿತಕ್ಕಾಗಿ ಮೈತ್ರಿ ಮಾಡಿಕೊಂಡಿದ್ದೇವೆ. ಮೈತ್ರಿ ಮಾಡಿಕೊಳ್ಳದೆ ಇದ್ರೆ ಬಿಜೆಪಿಗೆ ಅಧಿಕಾರ ಸಿಗುತ್ತಿತ್ತು. ನಾನು ಮೇಯರ್ ಚುನಾವಣೆ ವಿಚಾರದಲ್ಲಿ ಯಾವುದೇ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡಿಲ್ಲ. ನಾನು ಪಕ್ಷದ ಅಧ್ಯಕ್ಷರು, ಸಿಎಲ್ಪಿ ನಾಯಕರ ಅಣತಿಯಂತೆ ನಡೆದುಕೊಂಡಿದ್ದೇನೆ.
ಹನೂರು, ಟಿ ನರಸಿಪುರದಲ್ಲಿ ಲೋಕಲ್ನಲ್ಲಿ ಮೈತ್ರಿ ಆಗಿದೆ. ಅಲ್ಲಿ ಅನ್ವಯವಾದ ಮೈತ್ರಿ ಇಲ್ಲಿ ಯಾಕೆ ಅನ್ವಯಿಸಬಾರದು. ನಾನು ಸಿದ್ದರಾಮಯ್ಯ ವಿರುದ್ಧ, ಪಕ್ಷದ ವಿರುದ್ಧ ಕೆಲಸ ಮಾಡಿಲ್ಲ. ಶಿಸ್ತು ಸಮಿತಿ ನೋಟಿಸ್ನಲ್ಲೂ ತಮ್ಮ ನಡೆ ಸಮರ್ಥನೆ ಮಾಡಿಕೊಂಡ ತನ್ವೀರ, ಇಲ್ಲಿ ಕೆಪಿಸಿಸಿ ಸೂಚನೆ ಮೇಲೆ ನಿರ್ಧಾರ ಎಂದು ತಿಳಿಸಿದ್ದಾರೆ. ಜವಾಬ್ದಾರಿ ಕೊಟ್ಟ ದಿನದಿಂದ ಚುನಾವಣೆ ಮುಗಿಯುವವರೆಗೂ ಎಲ್ಲ ಪ್ರಕ್ರಿಯೆಗಳನ್ನು ನಾಯಕರ ಗಮನಕ್ಕೆ ತಂದಿದ್ದೇನೆ ಎಂದು ವರದಿಯಲ್ಲಿ ವಿವರಿಸಿದ್ದಾರೆ ಎಂಬ ಮಾಹಿತಿ ಇದೆ.