ಮೈಸೂರು :ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ನಡೆಯುತ್ತಿರುವ ಸಿಎಂ ಸ್ಥಾನದ ಜಟಾಪಟಿ ನಡುವೆ ಇದೀಗ ಶಾಸಕ ತನ್ವೀರ್ ಸೇಠ್ ಎಂಟ್ರಿ ಕೊಟ್ಟಿದ್ದಾರೆ. ಕಾಂಗ್ರೆಸ್ನಲ್ಲಿ ಭುಗಿಲೆದ್ದಿರುವ ಮುಂದಿನ ಸಿಎಂ ವಿಚಾರವಾಗಿ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ.
ಅಲ್ಪಸಂಖ್ಯಾತರು ಸಿಎಂ ಆಗಬೇಕು ಎನ್ನುವ ಆಸೆ ಇಟ್ಟುಕೊಳ್ಳುವುದು ತಪ್ಪಲ್ಲ. ಅಲ್ಪಸಂಖ್ಯಾತರು ಯಾರು ಸಮರ್ಥರಿದ್ದಾರೆ ಅವರೆಲ್ಲ ಸಿಎಂ ಆಗುವ ಆಸೆ ಇಟ್ಟುಕೊಳ್ಳಬಹುದು. ಪೈಪೋಟಿ ಮಾಡುವುದರಲ್ಲಿ ನಾನೂ ಸಮರ್ಥ ಇದ್ದೇನೆ ಎಂದು ಮುಂದಿನ ಸಿಎಂ ವಿಚಾರವಾಗಿ ಹೊಸ ಬಾಂಬ್ ಸಿಡಿಸಿದರು.