ಮೈಸೂರು:ನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಸುವ ಸಂಬಂಧ ಪಕ್ಷದಿಂದ ನನಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಪಾಲಿಕೆ ಕಚೇರಿ ವಲಯ 9ರಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ನಾನು ಯಾವುದೇ ಪಕ್ಷದೊಂದಿಗೆ ಮಾತುಕತೆ ಆಡಿಲ್ಲ. ವರಿಷ್ಠರ ಸೂಚನೆ, ತೀರ್ಮಾನದಂತೆ ಆಗುತ್ತದೆ. ಮೇಯರ್ ಚುನಾವಣೆಗೆ ಇನ್ನೂ ಎರಡು ದಿನ ಇರುವುದರಿಂದ ಪಕ್ಷದ ಸೂಚನೆಯಂತೆ ನಡೆಯುತ್ತೇವೆ ಎಂದರು.