ಮೈಸೂರು: ಪಾರಂಪರಿಕ ನಗರದಲ್ಲಿ ಪಾರಂಪರಿಕ ಟಾಂಗಾಗಳು ರಾಜರ ಕಾಲದಲ್ಲಿ ಹೆಚ್ಚಿನ ಮಾನ್ಯತೆ ಪಡೆದಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಂದ ಟಾಂಗಾ ಗಾಡಿಗಳು ಕಡಿಮೆಯಾಗುತ್ತಿವೆ. ಈ ಬಾರಿ ಅದ್ಧೂರಿ ದಸರಾದ ಹಿನ್ನೆಲೆಯಲ್ಲಿ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಟಾಂಗಾ ವಾಲಾಗಳಿದ್ದಾರೆ. ಅವರು ತಮ್ಮ ನಿರೀಕ್ಷೆಗಳೇನು ಎಂಬುದರ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದಾರೆ.
ಸಾಂಸ್ಕೃತಿಕ ನಗರಿ ಎಂಬ ಹೆಗ್ಗಳಿಕೆ ಹೊಂದಿರುವ ಮೈಸೂರಿಗೆ ಬರುವ ಪ್ರವಾಸಿಗರು ನಗರವನ್ನು ಒಂದು ಸುತ್ತು ಟಾಂಗಾ ಗಾಡಿಗಳಲ್ಲಿ ಕುಳಿತು ಸುತ್ತು ಹಾಕಲು ಎಲ್ಲ ಇಷ್ಟ ಪಡುತ್ತಾರೆ. ಆದರೆ, ಕೆಲವು ವರ್ಷಗಳಿಂದ ಆಧುನಿಕತೆಗೆ ಸಿಲುಕಿ ಪಾರಂಪರಿಕ ಟಾಂಗಾಗಳು ಕಡಿಮೆಯಾಗುತ್ತಿದ್ದು, ಕಳೆದ 2 ವರ್ಷಗಳಿಂದ ಕೋವಿಡ್ ಹೊಡೆತಕ್ಕೆ ಸಿಲುಕಿ ಟಾಂಗಾವಾಲಾಗಳು ನಲುಗಿದ್ದಾರೆ.
ಈ ಬಾರಿ ಅದ್ಧೂರಿ ದಸರಾದ ಹಿನ್ನೆಲೆಯಲ್ಲಿ ಸರ್ಕಾರ ಇವರಿಗೆ ಸೌಲಭ್ಯಗಳನ್ನು ನೀಡಲಿ ಜೊತೆಗೆ ವಿಶೇಷ ಗೌರವ ಧನವನ್ನು ನೀಡಬೇಕು ಎಂದು ಆಗ್ರಹಿಸುವ ಟಾಂಗಾವಾಲಾರು, ಈ ಹಿಂದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಾಲದಲ್ಲಿ ಟಾಂಗಾವಾಲಾಗಳಿಗೆ ವಿಶೇಷ ಸಮವಸ್ತ್ರ ಹಾಗೂ ಇತರ ಸೌಲಭ್ಯಗಳನ್ನು ನೀಡಿದ್ದು ಬಿಟ್ಟರೆ ಬೇರೆ ಯಾರು ಸೌಲಭ್ಯಗಳನ್ನು ನೀಡಿಲ್ಲ ಎಂದು ಟಾಂಗಾವಾಲಾ ವೆಂಕಟೇಶ್ 'ಈಟಿವಿ ಭಾರತ' ಜೊತೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.