ಕರ್ನಾಟಕ

karnataka

ETV Bharat / state

ನಾನು ಶಕ್ತಿಧಾಮದ ಸ್ವಯಂಸೇವಕನಾಗಿರುತ್ತೇನೆ.. ನಟ ವಿಶಾಲ್ - ಈಟಿವಿ ಭಾರತ ಕನ್ನಡ

ತಮಿಳು ನಟ ವಿಶಾಲ್ ಶಕ್ತಿಧಾಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾನು ಶಕ್ತಿಧಾಮದ ಸ್ವಯಂಸೇವಕನಾಗಿರುತ್ತೇನೆ ಎಂದು ಹೇಳಿದ್ದಾರೆ.

tamil-actor-vishal-visits-shakthidham-mysore
ನಾನು ಶಕ್ತಿಧಾಮದ ಸ್ವಯಂಸೇವಕನಾಗಿರುತ್ತೇನೆ.. ನಟ ವಿಶಾಲ್ನಾನು ಶಕ್ತಿಧಾಮದ ಸ್ವಯಂಸೇವಕನಾಗಿರುತ್ತೇನೆ.. ನಟ ವಿಶಾಲ್

By

Published : Sep 10, 2022, 5:43 PM IST

ಮೈಸೂರು : ನಾನು ಎಂದಿಗೂ ಶಕ್ತಿಧಾಮದ ಸ್ವಯಂಸೇವಕನಾಗಿರುತ್ತೇನೆ. ಇದಕ್ಕೆ ರಾಜ್ ಕುಟುಂಬದವರು ಅನುಮತಿ ನೀಡಲಿ ಎಂದು ತಮಿಳುನಟ ವಿಶಾಲ್ ಅವರು ದೊಡ್ಮನೆ ಕುಟುಂಬಕ್ಕೆ ಮನವಿ ಮಾಡಿದ್ದಾರೆ. ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮಕ್ಕೆ ಭೇಟಿ ನೀಡಿ,ಟ್ರಸ್ಟಿಗಳು ಹಾಗೂ ಮಕ್ಕಳೊಂದಿಗೆ ಅವರು ಮಾತನಾಡಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಶಕ್ತಿಧಾಮ ನನಗೆ ದೇವಸ್ಥಾನದ ಅನುಭವ ನೀಡಿದೆ. ದೇವಸ್ಥಾನಕ್ಕೆ ಹೋದರೆ ಒಂದು ದೇವರ ದರ್ಶನ ಪಡೆಯಬಹುದು. ಆದರೆ, ಇಲ್ಲಿ ಒಂದೊಂದು ಮಕ್ಕಳಲ್ಲೂ ಒಂದೊಂದು ದೇವರನ್ನು ನೋಡಿದೆ. ಮಕ್ಕಳು ತುಂಬಾ ಲವಲವಿಕೆಯಿಂದ ಇದ್ದಾರೆ ಎಂದು ಹೇಳಿದರು.

ಪುನೀತ್ ರಾಜ್ ಕುಮಾರ್​ ಹಾಗೂ ಗೀತಮ್ಮ ಅವರದ್ದು ಅತ್ಯುತ್ತಮ ಕೆಲಸ. ಈ ಬಗ್ಗೆ ಶಿವಕುಮಾರ್​ ಜೊತೆ ಮಾತನಾಡಿದ್ದೇನೆ. ರಾಜ್ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಇಲ್ಲಿನ ಮಕ್ಕಳ ಜೊತೆ ನಾನು ಮಾತನಾಡಿದೆ. ಡ್ಯಾನ್ಸ್ ಮಾಡಿದ್ರು, ಆಟವಾಡಿದ್ರು ತುಂಬಾ ಉತ್ಸಾಹದಿಂದ ಇದ್ದಾರೆ. ಇಲ್ಲಿರುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಇದೆ ಎಂದು ಹೇಳಿದರು.

ಇದನ್ನೂ ಓದಿ :ಮೈಸೂರಿನ ಶಕ್ತಿಧಾಮಕ್ಕೆ ನಟ ವಿಶಾಲ್ ಭೇಟಿ.. ಮಕ್ಕಳೊಂದಿಗೆ ಮಾತುಕತೆ

ABOUT THE AUTHOR

...view details