ಕರ್ನಾಟಕ

karnataka

ETV Bharat / state

ಖಾಸಗಿ ಬಸ್ ಚಾಲಕರು-ಸಾರಿಗೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ

ಇಂದಿನಿಂದ ಕೆಲವು ಸರ್ಕಾರಿ ಬಸ್​ಗಳು ಸೇವೆ ಆರಂಭಿಸಿವೆ. ಖಾಸಗಿ ಬಸ್​ ಮಾಲೀಕರು ಮೊದಲು ನಮಗೆ ಹೊರಡಲು ಬಿಡಿ, ನಂತರ ನಿಮ್ಮ ಬಸ್​ಗಳನ್ನು ಸಂಚರಿಸಲು ಬಿಡಿ ಎಂದು ವಾಗ್ವಾದಕ್ಕಿಳಿದರು.

talk war between transportation officials  and private bus owners
ಮೈಸೂರು ಬಸ್​ ನಿಲ್ದಾಣದಲ್ಲಿ ಮಾತಿನ ಚಕಮಕಿ

By

Published : Apr 11, 2021, 11:50 AM IST

ಮೈಸೂರು:‌ ಸಾರಿಗೆ ಬಸ್ ನಿಲ್ದಾಣದಿಂದ ಬಸ್​ಗಳನ್ನು ಬಿಡಲು ಮೊದಲು ಅವಕಾಶ ನೀಡಬೇಕೆಂಬ ಒತ್ತಾಯದ ಕಾರಣ ಸಾರಿಗೆ ಅಧಿಕಾರಿಗಳು ಮತ್ತು ಖಾಸಗಿ ಬಸ್‌ಗಳ ಚಾಲಕರು, ನಿರ್ವಾಹಕರ ನಡುವೆ ವಾಗ್ವಾದ ನಡೆಯಿತು.

ಮೈಸೂರು ಬಸ್​ ನಿಲ್ದಾಣದಲ್ಲಿ ಮಾತಿನ ಚಕಮಕಿ

ಸಾರಿಗೆ ನೌಕರರ ಮುಷ್ಕರ ಐದನೇ ಕಾಲಿಟ್ಟಿದೆ. ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕೆಎಸ್​ಆರ್​ಟಿಸಿ ಬಸ್‌ಗಳಿಲ್ಲದೇ ಖಾಸಗಿ ಬಸ್‌ಗಳು ಸೇವೆಯಲ್ಲಿವೆ. ಒಂದೊಂದಾಗಿ ಸಾರಿಗೆ ಬಸ್​ಗಳು ರಸ್ತೆಗಿಳಿಯುತ್ತಿದ್ದು ಖಾಸಗಿ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರು ಆಕ್ರೋಶಗೊಂಡಿದ್ದಾರೆ.

ನಾವು ಬೆಳಿಗ್ಗೆಯಿಂದಲೇ ನಮ್ಮ ಬಸ್‌ಗಳನ್ನು ತಂದು ನಿಲ್ಲಿಸಿ ಕಾದು ಕುಳಿತಿದ್ದೇವೆ. ನೀವು ಈಗ ಬಂದು ಏಕಾಏಕಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಂಚರಿಸಲು ಬಿಟ್ಟರೆ ನಮ್ಮ ಗತಿಯೇನು? ನಮ್ಮನ್ನು ಉಪಯೋಗಿಸಿಕೊಂಡು ಬಿಸಾಡುತ್ತೀರಾ? ನಾಲ್ಕು ದಿನಗಳಿಂದ ನಾವು ಸೇವೆ ನೀಡುತ್ತಿದ್ದೇವೆ. ಈಗ ಬಂದಿರೋ ಕೆಎಸ್​ಆರ್​​ಟಿಸಿ ಬಸ್ ಭರ್ತಿಯಾದರೆ ನಾವು ಏನ್ ಮಾಡೋದು?‌ ಎಂದು ಸಾರಿಗೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ನಮ್ಮ ಬಸ್‌ಗಳನ್ನು ಮೊದಲು ಬಿಡಿ, ಆಮೇಲೆ ನಿಮ್ಮ ಬಸ್​ಗಳು ಹೊರಡಲಿ. ಖಾಸಗಿ ಬಸ್​ಗಳ ಮಾಲೀಕರಿಗೂ ಅನುಕೂಲ ಮಾಡಿಕೊಡಿ ಎಂದು ಒತ್ತಾಯಿಸಿದರು.

ABOUT THE AUTHOR

...view details