ಮೈಸೂರು: ನಂಜನಗೂಡು ನಗರದ ಲಿಂಗಣ್ಣನವರ ಛತ್ರದಲ್ಲಿ ತೆರೆದಿರುವ ಕಾಳಜಿ ಕೇಂದ್ರದಲ್ಲಿದ್ದ ಮಹಿಳೆಯನ್ನು ಸ್ವಗ್ರಾಮಕ್ಕೆ ಕಳುಹಿಸಿ ಕೊಡುವ ಮೂಲಕ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.
ಕಾಳಜಿ ಕೇಂದ್ರದಲ್ಲಿದ್ದ ಮಹಿಳೆಯನ್ನು ತವರಿಗೆ ತಲುಪಿಸಿದ ತಹಶೀಲ್ದಾರ್ - ನಂಜನಗೂಡು ತಹಶೀಲ್ದಾರ್ ಮೋಹನ ಕುಮಾರಿ,
ನಂಜನಗೂಡಿನ ತಹಶೀಲ್ದಾರ್ ಕಾಳಜಿ ಕೇಂದ್ರದಲ್ಲಿದ್ದ ಮಹಿಳೆಯನ್ನು ತವರಿಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ಸೋಂಕು ಹೆಚ್ಚಿದ ಹಿನ್ನೆಲೆ ರಾಜ್ಯದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಯಿತು. ನಂಜನಗೂಡಿನಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ತಾಲೂಕಿನ ದೊಡ್ಡಕವಲಂದೆ ಹೋಬಳಿಯ ಕಾರ್ಯ ಗ್ರಾಮದಿಂದ ಮಾಲಾ ಪಟ್ಟಣಕ್ಕೆ ಬಂದಿದ್ದರು. ಲಾಕ್ಡೌನ್ ಪರಿಣಾಮ ಮಾಲಾ ತಮ್ಮ ಊರಿಗೆ ತೆರಳಲು ಸಾಧ್ಯವಾಗದೇ ಆರೈಕೆ ಕೇಂದ್ರದಲ್ಲಿ ಕೆಲವು ದಿನಗಳ ಕಾಲ ತಂಗಿದ್ದರು.
ಪರಿಶೀಲನೆಗೆ ಬಂದ ತಹಶೀಲ್ದಾರ್ ಮೋಹನ ಕುಮಾರಿ ಅವರ ಬಳಿ ಮಾಲಾ ನಮ್ಮ ಊರಿಗೆ ಕಳುಹಿಸಿಕೊಡುವಂತೆ ಅಳಲು ತೋಡಿಕೊಂಡರು. ಮಾಲಾ ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಮೋಹನ ಕುಮಾರಿ, ಆಕೆಯನ್ನು ಸ್ವಗ್ರಾಮಕ್ಕೆ ತಲುಪಿಸಲು ವಾಹನ ವ್ಯವಸ್ಥೆ ಕಲ್ಪಿಸಿದರು. ಬಳಿಕ ಕಾರ್ಯ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಮಾಲಾರನ್ನು ತವರು ಮನೆಗೆ ಕಳುಹಿಸಿ ತಹಶೀಲ್ದಾರ್ ಮಾನವೀಯತೆ ಮೆರೆದಿದ್ದಾರೆ. ಹೀಗೆ ಮಾಲಾ ತಹಶೀಲ್ದಾರ್ ಸಹಾಯದಿಂದ ತವರು ಮನೆ ಸೇರಿದರು.