ಮೈಸೂರು:ವಿಶೇಷಚೇತನನ ಮನವಿಗೆ ಓಗೊಟ್ಟು ಕಾಳಜಿ ಕೇಂದ್ರದಿಂದ 700 ಕಿಲೋ ಮೀಟರ್ ದೂರದ ಊರಿಗೆ ಕಳುಹಿಸಿಕೊಡುವ ಮೂಲಕ ತಹಶೀಲ್ದಾರ್ ಮಾನವೀಯತೆ ಮೆರೆದಿದ್ದಾರೆ.
ಹೌದು, ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ನೀಲಕಂಠ ಎಂಬ ವಿಶೇಷಚೇತನ, ನಂಜನಗೂಡು ತಾಲೂಕಿನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ. ಈತ ತಮ್ಮ ಹುಟ್ಟೂರಿಗೆ ಹೋಗಬೇಕೆಂದು ತಹಶೀಲ್ದಾರರಿಗೆ ಮನವಿ ಮಾಡಿದ್ದಾನೆ. ಮನವಿಗೆ ಮರುಗಿದ ತಹಶೀಲ್ದಾರ್ ಮೋಹನ್ ಕುಮಾರಿ ಅವರು ಮೀರಾ ಕಂಪನಿ ಸಹಾಯದಿಂದ ಕಾರು ಬುಕ್ ಮಾಡಿ, ಮಸ್ಕಿಗೆ ಕಳುಹಿಸಿಕೊಟ್ಟಿದ್ದಾರೆ.
ನಂಜನಗೂಡಿನಿಂದ ರಾಯಚೂರಿಗೆ ವಿಶೇಷ ಚೇತನನನ್ನು ಕಳುಹಿಸಿದ ತಾಲೂಕು ಆಡಳಿತ ತಾಲೂಕಿನಲ್ಲಿ ಕಾಳಜಿ ಕೇಂದ್ರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಆಶ್ರಯವಿಲ್ಲದವರಿಗೆ ಲಿಂಗಯ್ಯ ಛತ್ರದಲ್ಲಿ ಊಟದ ವ್ಯವಸ್ಥೆ ಮಾಡಿ ಆಶ್ರಯ ನೀಡಿದ್ದೇವೆ. ಮೊನ್ನೆ ಇಬ್ಬರು ಮಹಿಳೆಯರನ್ನು ತಾಲೂಕು ಆಡಳಿತ, ನಗರಸಭೆ ಮತ್ತು ಇನ್ನಿತರೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ತವರಿಗೆ ಕಳುಹಿಸಿದ್ದೇವೆ. ಇದೀಗ ನೀಲಕಂಠ ಎಂಬ 37 ವರ್ಷದ ವಿಶೇಷ ಚೇತನನನ್ನು ರಾಯಚೂರಿನ ಮಸ್ಕಿ ತಾಲೂಕಿಗೆ ಮೀರಾ ಕಂಪನಿಯ ಸಹಯೋಜನೆಯೊಂದಿಗೆ ಸುರಕ್ಷಿತವಾಗಿ ಕಳುಹಿಸಿಕೊಡಲು ಸುರಕ್ಷಿತ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ಮೋಹನ ಕುಮಾರಿ ತಿಳಿಸಿದ್ದಾರೆ.
ಇದನ್ನು ಓದಿ: ಕಾಳಜಿ ಕೇಂದ್ರದಲ್ಲಿದ್ದ ಮಹಿಳೆಯನ್ನು ತವರಿಗೆ ತಲುಪಿಸಿದ ತಹಶೀಲ್ದಾರ್